Join Our

WhatsApp Group
Info
Trending

ರಾಜ್ಯದಲ್ಲಿ ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟ: ಜುಲೈ 7 ರಿಂದ ಪರೀಕ್ಷೆ ಆರಂಭ

ಬೆಂಗಳೂರು: ವೃತ್ತಿಪರ ಕೋರ್ಸ್‍ಗಳ ಆಯ್ಕೆಗಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳಾಪಟ್ಟಿ ಶನಿವಾರ ಪ್ರಕಟವಾಗಿದೆ.
ರಾಜ್ಯದಲ್ಲಿ ಜುಲೈ 7ರಿಂದ ಸಿಇಟಿ ಪರೀಕ್ಷೆ ಆರಂಭವಾಗಲಿದೆ. ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳು ಕನ್ನಡ ಪರೀಕ್ಷೆಯನ್ನು ಬರೆಯಲಿದ್ದಾರೆ. ರಾಜ್ಯದಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ, ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ಹಾಗೂ ಇತರೆ ರಾಜ್ಯಗಳ ಸಿಇಟಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂಬುದಾಗಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಪರೀಕ್ಷಾ ವೇಳಾಪಟ್ಟಿ ಹೀಗಿದೆ ನೋಡಿ: ಜುಲೈ 7 ಬುಧವಾರ ಬೆಳಗ್ಗೆ 10.30ರಿಂದ 11.50: ಜೀವವಿಜ್ಞಾನ, ಮಧ್ಯಾಹ್ನ 2.30ರಿಂದ 3.50: ಗಣಿತ, ಜುಲೈ 8 ಗುರುವಾರ ಬೆಳಗ್ಗೆ 10.30ರಿಂದ 11.50: ಭೌತ ವಿಜ್ಞಾನ, ಮಧ್ಯಾಹ್ನ 2.30ರಿಂದ 3.50: ರಸಾಯನವಿಜ್ಞಾನ, ಜು.9 ಶುಕ್ರವಾರ ಬೆಳಗ್ಗೆ 11.30ರಿಂದ 12.30: ಕನ್ನಡ ಪರೀಕ್ಷೆ ನಡೆಯಲಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Check Also
Close
Back to top button