Focus NewsImportant
Trending

ಸಮುದ್ರದ ಅಲೆಗೆ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಟ: ಪ್ರವಾಸಿಗನ ಜೀವ ರಕ್ಷಣೆ

ಗೋಕರ್ಣ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಗೋಕರ್ಣದ ಓಂ ಬೀಚ್‌ಗೆ ಧಾರವಾಡದದಿಂದ ಪ್ರವಾಸಕ್ಕೆ ಬಂದ 12 ಜನರ ತಂಡದಲ್ಲಿ, ಓರ್ವ ಯುವಕ ಸಮುದ್ರದ ಅಲೆಗೆ ಸಿಲುಕಿ ಸಾವು ಬದುಕಿನ ಮಧ್ಯೆ ಹೊರಾಡುತ್ತಿರುವ ಸಂದರ್ಭದಲ್ಲಿ ಇಲ್ಲಿನ ಲೈಫ್ ಗಾರ್ಡ್ ಸಿಬ್ಬಂದಿಗಳು ಧಾವಿಸಿ ಪ್ರವಾಸಿಗನ ಜೀವವನ್ನು ರಕ್ಷಿಸಿದ್ದಾರೆ. ಧಾರವಾಡದ ಅಣ್ಣಿಗೇರೆಯ ಶಂಕರಪ್ಪ ವಿಠ್ಠಲ ವಡ್ಡರ ಎಂಬಾತನೇ ಸಮುದ್ರದ ಅಲೆಗೆ ಸಿಲುಕಿದ್ದ ಯುವಕನಾಗಿದ್ದು, ಲೈಫ್ ಗಾರ್ಡ್ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಯದಿಂದ ಪಾರಾಗಿದ್ದಾನೆ. ಈ ವೇಳೆ ಲೈಫ್‌ಗಾರ್ಡ್ ಸಿಬ್ಬಂದಿಗಳಾದ ಹರೀಶ ಮೂಡಂಗಿ, ಮಂಜೆಶ್ ಹರಿಕಾಂತ, ಪ್ರಭಾಕರ ಅಂಬಿಗ, ಗೋಕರ್ಣ ಠಾಣೆಯ ಪ್ರವಾಸಿ ಮಿತ್ರ ರಕ್ಷಕರಾದ ಮಣಿಕಂಠ ನಾಯ್ಕ ಹಾಜರಿದ್ದರು.

ವಿಸ್ಮಯ ನ್ಯೂಸ್, ಗೋಕರ್ಣ

Related Articles

Back to top button