ಅಂಕೋಲಾ: ನೀರಿನಲ್ಲಿ ಮುಳುಗಿ ಸಾವು: ತಾಲ್ಲೂಕಿನ ಡೊಂಗ್ರಿ ಗ್ರಾಮದ ಯುವಕ ಸುಶಾಂತ ಪ್ರಕಾಶ ನಾಯ್ಕ (22) ಗಂಗಾವಳಿ ನದಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು,. ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಮೂಲತ: ತಾಲೂಕಿನ ಕುಂಬಾರಕೇರಿಯವರಾಗಿದ್ದ ಇವರ ಕುಟುಂಬ ಕೃಷಿ ಮತ್ತಿತರ ಕೆಲಸ ನಿರ್ವಹಿಸಿಕೊಂಡು ಡೊಂಗ್ರಿಯಲ್ಲಿ ವಾಸವಾಗಿದ್ದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ತಾಲೂಕ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದ್ದು ಮೃತನ ಕುಟುಂಬಸ್ಥರು ಸಂಬಂಧಿಗಳು ಸಮಾಜ ಬಾಂಧವರು ರೋಧಿಸುತ್ತಿರುವುದು ಕಂಡುಬಂತು.
ತಾಲೂಕಿನಲ್ಲಿ ಸೋಮವಾರ ಸಂಭವಿಸಿದ 4 ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ 63 ರ ಅಂಕೋಲಾ -ಹುಬ್ಬಳ್ಳಿ ಮಾರ್ಗಮಧ್ಯೆ, ಇತ್ತೀಚಿಗೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸಂಬಂಧಿಸಿದ ಇಲಾಖೆಗಳು ಸೂಕ್ತ ಮುಂಜಾಗ್ರತೆ ಕೈಗೊಳ್ಳುತ್ತಿರುವ ನಡುವೆಯೇ ಮತ್ತೊಂದು ರಸ್ತೆ ಅಪಘಾತ ಪ್ರಕರಣ ಸಂಭವಿಸಿದೆ.
ಸರಳೆ ಬೈಲ್ ಬಳಿ ಸೋಮವಾರ ನಸುಕಿನಲ್ಲಿ ಲಾರಿ ಚಾಲಕನೋರ್ವ ತನ್ನ ವಾಹನದಿಂದ ಇಳಿದು ಹೆದ್ದಾರಿ ದಾಟುವ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು , ಚಾಲಕ ಬಸಪ್ಪ ಅರ್ಜುನ್ ತಳಗೇರಿ (32) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕತ್ತಲು ಕಳೆದು ಸ್ವಲ್ಪ ಸಮಯದ ಬಳಿಕ ಸ್ಥಳೀಯರ ಗಮನಕ್ಕೆ ಬಂದು,,ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದೆ.
ಆತ್ಮಹತ್ಯೆ:ತಾಲೂಕಿನ ಕೋನಾಳ ಗ್ರಾಮದ ವಿಶ್ವೇಶ್ವರ ರಾಮಚಂದ್ರ ಭಟ್ಟ (60) ಎಂಬುವವರು ತನ್ನ ಮನೆಯ ಅಂಗಳದಲ್ಲಿ ನೇಣಿಗೆ ಶರಣಾಗಿದ್ದು, ಸ್ಥಳೀಯರ ಮೂಲಕ ವಿಷಯ ತಿಳಿದ ಸಂಬಂಧಿಯೋರ್ವ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಕಸ್ಮಿಕ ಸಾವು: ತಾಲೂಕಿನ ನೇವೆಳಸೆ ಗ್ರಾಮದ ಅರುಣ ಮಂಕಾಳು ಗೌಡ ಈತನನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಕುಮಟಾ ಆಸ್ಪತ್ರೆಯೊಂದಕ್ಕೇ ದಾಖಲಿಸಲಾಗಿತ್ತು. ವಿಪರೀತ ಕುಡಿತದ ಚಟ ಇತ್ತೆಂದು ಹೇಳಲಾದ ಈ ವ್ಯಕ್ತಿಯು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.
ಈ ಎಲ್ಲಾ ಪ್ರಕರಣಗಳ ಕುರಿತು ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..