ಅಂಕೋಲಾ ಜುಲೈ 2: ಬೆಳಸೆ ಚಂದುಮಠ ವ್ಯಾಪ್ತಿಯ 45 ರ ಮಹಿಳೆಯಲ್ಲಿ ಸೋಂಕು ಲಕ್ಷಣ ಕಾಣಿಸಿಕೊಂದಿದೆ. ಈ ಮೂಲಕ ತಾಲೂಕಿನಲ್ಲಿ ಒಟ್ಟೂ 15 ಕರೊನಾ ಪ್ರಕರಣಗಳು ಸಕ್ರಿಯವಾಗಿದೆ.
ಸೋಂಕು ಮುಕ್ತರಾದ 4ಜನರನ್ನು ಇಂದು ಬಿಡುಗಡೆ ಗೊಳಿಸಲಾಗಿದೆ. ಒಟ್ಟು 4 ಸೋಂಕಿತರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೋಂ ಐಸೋಲೇಶನ್ ನಲ್ಲಿ 11 ಜನರಿದ್ದಾರೆ.
ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದ ತಾಲೂಕಿನ ಹಳವಳ್ಳಿ ವ್ಯಾಪ್ತಿಯ 54ರ ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ 30ರ ರಾತ್ರಿ ಮತ್ತು ಪಟ್ಟಣ ವ್ಯಾಪ್ತಿಯ ಕೆಇಬಿ ಹತ್ತಿರದ 76ರ ವೃದ್ಧ ಕಾರವಾರ ಕ್ರಿಮ್ಸ್ ನಲ್ಲಿ ಜು 1 ಮೃತರಾಗಿದ್ದರು. ನಂತರ ಕಣಗಿಲದ44 ರ ಯುವಕ ರಾತ್ರಿ 9.30ರ ಸುಮಾರಿಗೆ ಮೃತನಾಗಿದ್ದು ಈ ಮೂವರ ಸಾವು ಸೇರಿ, ಈ ವರೆಗೆ ತಾಲೂಕಿನಲ್ಲಿ ಒಟ್ಟೂ 61 ಕರೋನಾ ಸಾವಿನ ಪ್ರಕರಣಗಳು ದಾಖಲಾಗಿವೆ.
ಮೃತ ದೇಹಗಳ ಸಾಗಾಟ, ಅಂತ್ಯ ಸಂಸ್ಕಾರ ನಡೆಸಲು ಆಯಾ ವ್ಯಾಪ್ತಿಯ ಸ್ಥಳೀಯ ಕರೊನಾ ವಾರಿಯರ್ಸ ತಂಡ ಕೊವಿಡ್ ಮಾರ್ಗ ಸೂಚಿ ಪಾಲನೆಗೆ ಒತ್ತು ನೀಡಿದಂತಿತ್ತು. ಮೃತರ, ಕುಟುಂಬ ಸದಸ್ಯರು, ಸಂಬಂಧಿಗಳು,,ಆಪ್ತರು, ಸ್ಥಳೀಯರು ಸೇರಿ ಇತರೆ ಸಮಾಜ ಸೇವಕರು ಸಹಕರಿಸಿದರು ಎನ್ನಲಾಗಿದೆ.
ಕರೊನಾ 2ನೇ ಅಲೆಯೂ ಕಡಿಮೆಯಾಯಿತೆಂದು ತಿಳಿದು ಮೈಮರೆಯದೇ ಎಲ್ಲರೂ ತಮ್ಮ ತಮ್ಮ ವೈಯಕ್ತಿಕ ಹಾಗೂ ಕುಟುಂಬದ ಆರೋಗ್ಯ ಕಳಕಳಿ ವಹಿಸಬೇಕು ಮತ್ತು ಸೋಂಕು ಲಕ್ಷಣ ಕಾಣಿಸಿಕೊಂಡರೆ, ತಕ್ಷಣ ಪರೀಕ್ಷೆಗೊಳಪಟ್ಟು ಸೂಕ್ತ ಮುಂಜಾಗ್ರತೆ ವಹಿಸಬೇಕೆಂದು ತಾಲೂಕಾ ಆರೋಗ್ಯಾಧಿಕಾರಿಗಳು ಜನತೆಯಲ್ಲಿ ವಿನಂತಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ