Follow Us On

WhatsApp Group
ಮಾಹಿತಿ
Trending

ಜೋಯಿಡಾದಲ್ಲಿ ಅಪೌಷ್ಟಿಕ ಮಕ್ಕಳ ಉಚಿತ ತಪಾಸಣಾ ಶಿಬಿರ ಹಾಗೂ ಪೌಷ್ಟಿಕ ಕಿಟ್ ವಿತರಣಾ ಕಾರ್ಯಕ್ರಮ

ಜೊಯಿಡಾ:ಕರೊನಾ ಎರಡನೆ ಅಲೆ ಹೋಗಿ ಮೂರನೆ ಅಲೆ ಬರುತ್ತಿದೆ.ಯಾವ ಮಕ್ಕಳಿಗೆ ಅಪೌಷ್ಟಿಕತೆಯಿಂದ ಶಕ್ತಿ ಇರೋದಿಲ್ಲ ಅಂತಹ ಮಕ್ಕಳಿಗೆ ಈ ರೋಗ ಬಾಧೆ ಮೊದಲು ಬಾಧಿಸಬಹುದು. ತಾಯಂದಿರಲ್ಲಿ ಮೊದಲು ಜಾಗ್ರತಿ ಮೂಡಬೇಕು. ಮೂರು ತಿಂಗಳು ಮಕ್ಕಳನ್ನು ಹೊರಗೆ ಬಿಡದೆ ಮನೆಯಲ್ಲೆ ಜೊಪಾನ ಮಾಡಿಕೊಂಡರೆ ಈ ಕರೊನಾದಿಂದ ಗೆಲ್ಲಬಹುದು ಎಂದು ಚಿಕ್ಕ ಮಕ್ಕಳ ತಜ್ಞ ಡಾ: ಶ್ರೀಶೈಲ ಮಾದಣ್ಣನವರ ಹೇಳಿದರು.

ಅವರು ಸೊಮವಾರ ಜೊಯಿಡಾ ತಾಲೂಕಾ ಆಸ್ಪತ್ರೆಯಲ್ಲಿ ವಿ ಆರ್ ದೇಶಪಾಂಡೆ ಮೇಮೊರಿಯಲ್ ಟ್ರಸ್ಟ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಭ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅಪೌಷ್ಟಿಕ ಮಕ್ಕಳ ಉಚಿತ ತಪಾಸಣಾ ಶಿಭಿರ ಹಾಗೂ ಪೌಷ್ಟಿಕ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು..

ನಂತರ ಡಾ: ಶ್ರೀಶೈಲ ಮಾದಣ್ಣನವರ ಮತ್ತು ಇವರ ವೈಧ್ಯರ ತಂಡದಿಂದ 140 ಕ್ಕೂ ಹೆಚ್ಚು ಮಕ್ಕಳ ಆರೋಗ್ಯ ತಪಾಸಣಾ ನಡೆಸಿ 316 ಮಕ್ಕಳಿಗೆ ಪೌಷ್ಟಿಕ ಕೀಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕಾ ವೈಧ್ಯಾಧಿಕಾರಿ ಸುಜಾತಾ ಉಕ್ಕಲಿ, ತಾಲೂಕಾ ಆಸ್ಪತ್ರೆ ಆಡಳಿತಾಧಿಕಾರಿ ಡಾ: ವಿಜಯ ಕೊಚರಗಿ,ಜೊಯಿಡಾ ಸಿಡಿಪಿಓ ಶಾರಧಾಬಾಯಿ ಮರಾಠೆ, ರಾಜೇಂದ್ರ ಬೆಕಲ್,ರಮೇಶ ನಾಯ್ಕ,ದೇಶಪಾಂಡೆ ಆರ್.ಸೆ.ಟಿ ಯ ಅಶೋಕ ಸೂರ್ಯವಂಶಿ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಜೋಯಿಡಾ

Back to top button