ಭಟ್ಕಳದಲ್ಲಿ ಎಸಿಬಿ ದಾಳಿ: ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿ ವಶಕ್ಕೆ

ಭಟ್ಕಳ : ಇ-ಸ್ವತ್ತು ನೋಂದಣಿಗೆ ಸಂಬಂಧಿಸಿ ವ್ಯಕ್ತಿ ಒಬ್ಬರಿಂದ ಲಂಚ ಪಡೆಯುತ್ತಿದ್ದ ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯಿತಿ ಅಕೌಂಟೆಂಟ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.. ಬೆಳಕೆ ಪಂಚಾಯಿತಿಯ ಅಣ್ಣ ನಾಯ್ಕ ಎಸಿಬಿ ದಾಳಿಗೆ ಒಳಗಾದ ಸಿಬ್ಬಂದಿ. ಈತ ಕಳೆದ ೧೫ ದಿನಗಳ ಹಿಂದೆ ಇ -ಸ್ವತ್ತು ನೋಂದಣಿಗಾಗಿ ಆಗಮಿಸಿದ ಬೆಳಕೆ ಅಬ್ಬಿತ್ಲು ನಿವಾಸಿ ದೇವಿದಾಸ ನಾಯ್ಕ ಅವರ ಬಳಿ ೫ ಸಾವಿರ ಲಂಚದ ಬೇಡಿಕೆ ಇಟ್ಟಿದ್ದ. ಈ ಕರೆಯನ್ನು ರೆಕರ‍್ಡ ಮಾಡಿಕೊಂಡ ದೇವಿದಾಸ ನಾಯ್ಕ ಕಾರವಾರದ ಎಸಿಬಿ ಕಚೇರಿಗೆ ದೂರು ಸಲ್ಲಿಸಿ ಕರೆಯ ರೇಕರ‍್ಡ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂದಿಸಿ ಗುರುವಾರ ಇ-ಸ್ವತ್ತು ನೋಂದಣಿಯ ೧೧೧೦೦ ರೂಗಳು ಹಾಗೂ ಲಂಚದ ಬೇಡಿಕೆ ಇಟ್ಟ ೫೦೦೦ ರೂ ಸೇರಿ ಒಟ್ಟು ೧೬೧೦೦ರೂಗಳನ್ನು ನೀಡುವಾಗ ಬೆಳಕೆ ಪಂಚಾಯಿತಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅಣ್ಣ ನಾಯ್ಕ ಇವರನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ಡಿವೈಎಸ್ಪಿ ಶ್ರೀಕಾಂತ ಕೆ. ನೇತೃತ್ವದ ತಂಡ ದಾಳಿ ನಡೆಸಿ ದಾಖಲೆಗಳನ್ನು ಪರೀಶಿಲನೆ ನಡೆಸಿ ಹೆಚ್ಚಿನ ವಿಚಾರಣೆಗಾಗಿ ಕಾರವಾರ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version