ಉತ್ತರಕನ್ನಡದಲ್ಲಿ ನಾಳೆ ಲಭ್ಯವಿರುವ ಲಸಿಕೆಯ ವಿವರ: ಎಲ್ಲೆಲ್ಲಿ ಎಷ್ಟು ಡೋಸ್ ವ್ಯಾಕ್ಸಿನ್ ಇದೆ ನೋಡಿ?

ಕಾರವಾರ: ಉತ್ತರಕನ್ನಡ‌ ಜಿಲ್ಲೆಯಲ್ಲಿ‌ ನಾಳೆ 12680 ಕೋವಿಶೀಲ್ಡ್ ಮತ್ತು 4690 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ. ಈ‌ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಕುಮಟಾ ತಾಲೂಕಿನಲ್ಲಿ ಎಲ್ಲೆಲ್ಲಿ ವ್ಯಾಕ್ಸಿನೇಷನ್?

ಕುಮಟಾ: ತಾಲೂಕಿನಲ್ಲಿ‌ ನಾಳೆ‌‌ ಒಟ್ಟು 1210 ಕೋವಿಶೀಲ್ಡ್ ಲಸಿಕೆ ಮತ್ತು 440 ಕೋವ್ಯಾಕ್ಸಿನ್ ಡೋಸ್ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕ ಆಸ್ಪತ್ರೆ ಕುಮಟಾ 220 ಡೋಸ್, ಪ್ರಾಥಮಿಕ ಆರೋಗ್ಯ ಕೇಂದ್ರ ಗೋಕರ್ಣ, ಪ್ರಾಥಮಿಕ ಆರೋಗ್ಯ ಕೇಂದ್ರ ಬಂಕಿಕೊಡ್ಲು 100, ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಗುತ್ತಿ 40, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಡ್ಕಣಿ 50, ಹಿರಿಯ ಪ್ರಾಥಮಿಕ ಗಂಡುಮಕ್ಕಳ ಶಾಲೆ ಹೆಗಡೆ 100, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಗಾಲ್ 60, ಡೋಸ್ ಲಸಿಕೆ ಲಭ್ಯವಿದೆ.

ಪ್ರಾಥಮಿಕ ಶಾಲೆ ಮೊಸಳೆಸಾಲ 100, ಹಿ ಪ್ರಾ ಶಾಲೆ ಹುಬ್ಬಣಗೇರಿ 100, ಪ್ರಾ ಆ ಕೇಂದ್ರ ಕತಗಾಲ್, 100, ಹರ್ಕಡೆ 150, ಪ್ರಾ ಆ ಕೇಂದ್ರ ಸಂತೇಗುಳಿ 90 ಡೋಸ್ ಕೋವಿಶೀಲ್ಡ್ ಲಭ್ಯವಿದೆ. ಅಲ್ಲದೆ ಸಾರ್ವಜನಿಕ ಆಸ್ಪತ್ರೆ ಕುಮಟಾದಲ್ಲಿ 440 ಡೋಸ್ ಕೋವ್ಯಾಕ್ಸಿನ್ ಲಸಿಕೆ‌ ಇದೆ.

ಅಂಕೋಲಾದಲ್ಲಿ ನಾಳೆ 510 ಡೋಸ್ ಲಸಿಕೆ ಲಭ್ಯ


ಅಂಕೋಲಾ : ತಾಲೂಕಿನಲ್ಲಿ ಭಾನುವಾರ 3 ಹೊಸ ಕೋವಿಡ್ ಪಾಸಿಟಿವ್ ಕೇಸ ದಾಖಲಾಗಿದೆ. ಈ ಮೂಲಕ 21 ಸಕ್ರಿಯ ಪ್ರಕರಣಗಳಿವೆ. ವಿವಿಧ ಆಸ್ಪತ್ರೆಗಳಲ್ಲಿ 7 ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 14 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ.

ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3659 ಸೋಂಕು ಪ್ರಕರಣಗಳು ಪತ್ರೆಯಾಗಿದ್ದು, ತಾಲೂಕಿನಲ್ಲಿ ಒಟ್ಟು 72 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ.

ತಾಲೂಕಾ ಆಸ್ಪತ್ರೆ (100), ಅವರ್ಸಾ (150), ಅಂಬಾರ ಕೊಡ್ಲ (160) ಸೇರಿ ತಾಲೂಕಿನಲ್ಲಿ ಒಟ್ಟೂ 510 ಡೋಸ್ ಕೊವಿಡ್ ಲಸಿಕೆಗಳು ಸೆ.13 ರ ಸೋಮವಾರ ಲಭ್ಯವಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version