ಕಾರವಾರ; ನಗರಸಭೆಯಿಂದ ನಗರದ ಜಿಲ್ಲಾ ರಂಗಮoದಿರದಲ್ಲಿ ಪೌರ ಕಾರ್ಮಿಕರ ದಿನಾಚರಣೆಯನ್ನು ಕೆಕ್ ಕತ್ತರಿಸಿ, ಪೌರಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ವಿಭಿನ್ನವಾಗಿ ಗುರುವಾರ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಪರ ಜಿಲ್ಲಾಧಿಕಾರಿ ಎಚ್. ಕೆ ಕೃಷ್ಣಮೂರ್ತಿ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಸ್ವಚ್ಚತೆ ಇರುವ ಕಡೆ ದೇವರು ಇರುತ್ತಾನೆ. ದೇವರು ಸಂತೋಷ ಪಡುವಂತಹ ಪುಣ್ಯದ ಕೆಲಸವನ್ನು ನಮ್ಮ ಪೌರ ಕಾರ್ಮಿಕರು ಮಾಡುತ್ತಿದ್ದಾರೆ. ಇಂತವರ ಕಾರ್ಯದಿಂದಾಗಿ ದಿನ ಬೆಳಗಾದರೇ ನಗರದ ರಸ್ತೆಗಳು ಅಂದವಾಗಿ ಸ್ವಚ್ಛಂದವಾಗಿ ಕಾಣಲು ಸಾಧ್ಯವಾಗಿದೆ. ಇಂತಹ ಪೌರ ಕಾರ್ಮಿಕರಿಗೆ ಹೆಚ್ಚಿನ ಗೌರವ ನೀಡಬೇಕು. ತಮ್ಮ ಆರೋಗ್ಯವನ್ನು ಲೆಕ್ಕಿಸದೆ ದುಡಿಯುವ ಕಾರ್ಮಿಕರ ಕಷ್ಟ ಸಂತೋಷಗಳಿಗೆ ನಾವು ಕೂಡ ಎಂದೆ0ದು ಜೊತೆಯಾಗಿ ಇರುತ್ತೇವೆ ಎಂದು ಹೇಳಿದರು.
ಬಳಿಕ ಮಾತನಾಡಿದ ನಗರಸಭೆ ಉಪಾಧ್ಯಕ್ಷ ಪಿ.ಪಿ ನಾಯ್ಕ, ನಿತ್ಯ ನಗರ ಸ್ವಚ್ಚವಾಗಿರಬೇಕೆಂದರೇ ಪೌರ ಕಾರ್ಮಿಕರ ಮನಸ್ಸು ಕೂಡ ಸಂತೋಷವಾಗಿರಬೇಕಾಗುತ್ತದೆ. ಅಂತಹ ವಾತಾವರಣ ಕಲ್ಪಿಸುವ ಜವಬ್ದಾರಿ ನಮಗೂ ಕೂಡ ಇದೆ. ಒಂದೊಮ್ಮೆ ಸ್ವಚ್ಚತೆಯೇ ನಡೆಯದಿದ್ದಲ್ಲಿ ನಗರ ಹೇಗಿರಬಹುದು ಎಂದು ಕಲ್ಪನೆಯೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ನಗರಸಭೆ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ತಮದಲ್ಲಿ ನಗರಸಭೆ ಪೌರಾಯುಕ್ತ ಆರ್.ಪಿ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಧ್ಯಾ ಬಾಡ್ಕರ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಂ. ನಾರಾಯಣ, ನಂದಾ ಸಾವಂತ್ ಇದ್ದರು.
ವಿಸ್ಮಯ ನ್ಯೂಸ್., ಕಾರವಾರ