Follow Us On

WhatsApp Group
Uttara Kannada
Trending

ವೃಕ್ಷಮಾತೆ ತುಳಸಿಗೌಡ ಅವರಿಗೆ ಅಭಿನಂದನೆ: ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಅರ್ಥಪೂರ್ಣ ಕಾರ್ಯಕ್ರಮ : ತುಳಸಿ ಗೌಡರವರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದ ಶ್ರೀಗಳು

ಕುಮಟಾ: ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ವೃಕ್ಷಮಾತೆ ತುಳಸಿಗೌಡ ಅವರಿಗೆ ಅಭಿನಂದನಾಕಾರ್ಯಕ್ರಮಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಶ್ರೀಮಠದಬ್ರಹ್ಮಚಾರಿ ಶ್ರೀನಿಶ್ಚಲಾನಂದನಾಥ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿತುಳಸಿ ಗೌಡರವರಿಗೆ ಅಭಿನಂದನೆಸಲ್ಲಿಸಿಸನ್ಮಾನಮಾಡಲಾಯಿತು.

ಕಾರ್ಯಕ್ರಮವನ್ನುಉದ್ದೇಶಿಸಿಮಾತನಾಡಿದತುಳಸಿಗೌಡರವರು ಪರಿಸರದ ಬಗ್ಗೆ ತಮಗಿರುವಂತಹ ಅಪಾರವಾದ ಪ್ರೀತಿ ಪ್ರೇಮವನ್ನು ಹೊರಹಾಕಿದರು. ಅಕೇಶಿಯಾಗಿಡವನ್ನು ಹೊರತುಪಡಿಸಿ ಹಲಸು-ಮಾವು ಪೇರಲಗಿಡಗಳನ್ನು ಬೆಳೆಸಲು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಲಹೆಗಳನ್ನುನೀಡಿದರು. ಹಾಗೂ ತಮ್ಮಜೀವನದಲ್ಲಿ ವರ್ಷಕ್ಕೆ ಸುಮಾರು 30 ಸಾವಿರಗಿಡಗಳನ್ನು ನೆಟ್ಟಿರುವದಾಗಿ ಹೇಳಿದ್ದಾರೆ.

ಶ್ರೀಆದಿಚುಂಚನಗಿರಿಶಾಖಾಮಠದಬ್ರಹ್ಮಚಾರಿಶ್ರೀಗಳಾದಶ್ರೀನಿಶ್ಚಲಾನoದನಾಥಸ್ವಾಮೀಜಿಯವರುಮಾತನಾಡಿ ಇಂದಿನ ಯುವಪೀಳಿಗೆಯಲ್ಲಿಪರಿಸರದ ಆಸಕ್ತಿ ಕಡಿಮೆಯಾಗುತ್ತಿದೆ. ಪರಿಸರ ದಿನಾಚರಣೆಯಂದು ಮಾತ್ರ ಗಿಡಗಳನ್ನು ನೆಟ್ಟುನೀರು ಹಾಕಿದರೆ ಸಾಲದು. ಪರಿಸರದಬಗ್ಗೆ ವಿಶೇಷವಾದ ಕಾಳಜಿಯನ್ನುಹೊಂದಿರುವುದು ಅವಶ್ಯಕವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಬಿಜಿಎಸ್ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಲೀನಾಗೊನೆಹಳ್ಳಿ,ತುಳಸಿಗೌಡರವರ ಮೊಮ್ಮಗನಾದ ಶೇಖರ್‌ರ್ಗೌಡ,ಹಿರಿಯ ಶಿಕ್ಷಕರಾದ ಎಂಜಿ ಹಿರೇಕುಡಿ, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಹಾಜರಿದ್ದರು.

ವಿಸ್ಮಯ ನ್ಯೂಸ್, ಕುಮಟಾ

Back to top button