ಅಂಕೋಲಾ: ರಾಜ್ಯ ಸರಕಾರದ ಆದೇಶದಂತೆ ಅಂಕೋಲಾದಲ್ಲಿ ಮಾಸ್ಕ ಡೇ ಆಚರಿಸಲಾಯಿತು. ತಾಲೂಕ ಆಡಳಿತ ಮತ್ತು ಪುರಸಭೆ ವತಿಯಿಂದ ಆಯೋಜಿಸಲಾದ ಜಾಗೃತಿ ಜಾಥಾದಲ್ಲಿ ಆರೋಗ್ಯ ಇಲಾಖೆ, ಲಾಯನ್ಸ್ ಕ್ಲಭ್ ಸೇರಿದಂತೆ ವಿವಿಧ ಇಲಾಖೆ ಮತ್ತು ಸಂಘ ಸಂಸ್ಥೆಗಳು ಕೈಜೋಡಿಸುವ ಮೂಲಕ ಮಾಸ್ಕ ಡೇ ಆಚರಣೆ ಮಹತ್ವವನ್ನು ಸಾರಿ ಹೇಳಿದರು.
ತಹಶೀಲ್ದಾರ ಕಾರ್ಯಾಲಯದ ಹೊರ ಆವರಣದಲ್ಲಿ ಜಾಥಾ ಚಾಲನೆ ನೀಡಿದ ತಹಶೀಲ್ದಾರ ಉದಯ ಕುಂಬಾರ, ಮುಖಗವಸಗಳನ್ನು ಎಲ್ಲರೂ ತಪ್ಪದೇ ಧರಿಸಬೇಕು ಮತ್ತು ಸಾಮಾಜಿಕ ಆರೋಗ್ಯ ಕಾಳಜಿ ಯಿಂದ ಸಾಕಷ್ಟು ಮುಂಜಾಗೃತೆ ಕೈಗೊಳ್ಳುವಂತೆ ಕರೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಹಾದ ನೇತೃತ್ವದಲ್ಲಿ, ಜಾಥಾವು ಪಟ್ಟಣದ ಜೈಹಿಂದ ಮಾರ್ಗದ ಮೂಲಕ ಸಂಚರಿಸಿ ಪುರಸಭೆ ಎದುರುಗಡೆಯಿಂದ ಮೀನು ಮಾರುಕಟ್ಟೆ ಮುಖ್ಯರಸ್ತೆಯವರಿಗೆ ತೆರಳಿ ವಾಪಸ್ಸಾ ಯಿತು. ದಾರಿಯುದ್ದಕ್ಕೂ ಮಾಸ್ಕ ಡೇ ಆಚರಣೆಯ ಜಾಗೃತಿ ಫಲಕಗಳನ್ನು ತೋರಿಸುತ್ತಾ, ಮಾಸ್ಕ ಧರಿ ಸುವ ಮಹತ್ವವನ್ನು ತಿಳಿಹೇಳುತ್ತಾ ಅಕ್ಕಪಕ್ಕದ ಅಂಗಡಿಕಾರರು ಮತ್ತು ಸಾರ್ವಜನಿಕರಿಗೆ ಜಾಗೃತಿ ಸಂದೇಶ ನೀಡಲಾಯಿತು.
ಶಶಿಧರ ಶೇಣ್ವಿ ನೇತೃತ್ವದಲ್ಲಿ ಲಾಯನ್ಸ್ ಕ್ಲಬ್ ಸದಸ್ಯರು ನೂರಾರು ಮಾಸ್ಕಗಳನ್ನು ಉಚಿತವಾಗಿ ವಿತರಿಸಿ ದರಲ್ಲದೇ, ತಹಶೀಲ್ದಾರ ಕಾರ್ಯಾಲಯಕ್ಕೆ ಎರಡು ಸೆನಿಟೈಜರ್ ಸ್ಟ್ಯಾಂಡ್ ಕೊಡುಗೆ ನೀಡಿ ಗಮನ ಸೆಳೆ ದರು. ಈ ಸಂದರ್ಭದಲ್ಲಿ ಪಿಎಸ್‍ಐ ಈ.ಸಿ.ಸಂಪತ್, ಶಿರಸ್ತೇದಾರ ಎನ್.ಬಿ.ಗುನಗಾ, ಪುರಸಭೆ ಸದಸ್ಯ ರಾದ ಶಾಂತಾಲಾ ನಾಡಕರ್ಣಿ, ಜಯಾ ಬಿ. ನಾಯ್ಕ, ಪ್ರಕಾಶ ಗೌಡ, ಕಾರ್ತಿಕ ನಾಯ್ಕ, ವಿಶ್ವನಾಥ ಟಿ. ನಾಯ್ಕ, ಮಂಜುನಾಥ ನಾಯ್ಕ, ಅಶೋಕ ಶೆಡಗೇರಿ, ಶಬ್ಬೀರ ಶೇಖ್, ತಾರಾ ನಾಯ್ಕ, ರೇಖಾ ಗಾಂವ ಕರ, ಜೈರಾಬಿ ಬೆಂಗ್ರೆ ಮತ್ತಿತರ ಸದಸ್ಯರು, ಪುರಸಭೆ ಮತ್ತು ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯ ಕರ್ತೆಯರು ಹಾಜರಿದ್ದರು.
ಪ್ರಮುಖರಾದ ನಾಗಾನಂದ ಬಂಟ, ಉಮೇಶ ನಾಯ್ಕ, ಮೋಹನ ಹಬ್ಬು, ಆರ್.ಜಿ.ಗುಂದಿ, ಮಹಾಂತೇಶ ರೇವಡಿ, ಭಾಸ್ಕರ ನಾರ್ವೇಕರ್, ಜಗದೀಶ ನಾಯಕ ಮೊಗಟಾ, ಸುಬ್ರಹ್ಮಣ್ಯ ಗಾಂವಕರ, ನವಾಜ್ ಶೇಖ್, ನಾಗರಾಜ ಮಹಾಲೆ ಮತ್ತಿತರರು ಪಾಲ್ಗೊಂಡಿದ್ದರು.
ತಾಲೂಕಾ ಆರೋಗ್ಯಾಧಿಕಾರಿ ಅರ್ಚನಾ ನಾಯಕ ಮಾತನಾಡಿ ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದ್ದು, ತಾಲೂಕಿನ ಆರೋಗ್ಯ ಕಾಳಜಿ ಯಿಂದ ಎಲ್ಲರ ಸಹಕಾರದ ಅಗತ್ಯತೆ ಇದೆ ಎಂದು ಹೇಳಿದರು.
-ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ