ಬಸ್ ಕಂಡಕ್ಟರ್ ಗೆ ಕರೊನಾ:ಶುರುವಾಗಿದೆ ಆತಂಕ

ಯಲ್ಲಾಪುರದಲ್ಲಿ ಬಸ್ ಕಂಡಕ್ಟರ್ ಒಬ್ಬರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಜೂನ್ 11 ರಂದು ಯಲ್ಲಾಪುರದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ದು, ಬಳಿಕ ಜೂನ್ 13 ಕ್ಕೆ ವಾಪಸ್ಸಾಗಿದ್ದ ಈತನಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಹೀಗಾಗಿ ಈತನಿಗೆ ಕ್ವಾರಂಟೈನ್ ವಿಧಿಸಲಾಗಿತ್ತು. ಜೂನ್ 16 ಕ್ಕೆ ತಾಲೂಕಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ಈತನ ಗಂಟಲು ದ್ರವವನ್ನು ಜೂನ್ 18 ರಂದು ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು, ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಈತ ಯಲ್ಲಾಪುರ ನಗರದಲ್ಲಿ ಬಾಡಿಗೆ ರೂಮ್ ಮಾಡಿಕೊಂಡಿದ್ದು, ಸಾರಿಗೆ ನಿಗಮದ ಆರು ಮಂದಿ ಸಿಬ್ಬಂದಿ ಈತನೊಂದಿಗೆ ಒಂದೇ ರೂಮಿನಲ್ಲಿ ಇದ್ದರು. ಈಗ ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಯಲ್ಲಾಪುರ ಘಟಕದ ಎಲ್ಲಾ ಸಿಬ್ಬಂದಿಯನ್ನೂ ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

ಈತನಿದ್ದ KA 31 F 1577 ಸಾರಿಗೆ ಬಸ್ ನಲ್ಲಿ ಪ್ರಯಾಣಿಸಿದವರು ಯಾರಾದರೂ ಇದ್ದಲ್ಲಿ ತಾಲೂಕಾಡಳಿತ, ಜಿಲ್ಲಾಡಳಿತ, ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

[sliders_pack id=”1487″]
Exit mobile version