ಅಂಕೋಲಾ ಯುವಮೋರ್ಚಾ ತಂಡದಿಂದ ಗೀಗೀ ಪದಗಳ ಮೂಲಕ ಕರೊನಾ ಜಾಗೃತಿ

ಅಂಕೋಲಾ: ತಾಲೂಕಿನ ಭಾರತೀಯ ಜನತಾ ಪಾರ್ಟಿಯ ತಾಲೂಕ ಯುವಮೋರ್ಚಾ ಘಟಕ ದ ವತಿಯಿಂದ ಕೋವಿಡ್-19ನ ತೊಲಗಿಸಲು ಸರ್ವರು ಪಣ ತೊಡುವಂತೆ ಸಾರ್ವಜನಿಕವಾಗಿ “ಸಣ್ಣಮ್ಮದೇವಿ ಯುವಕ ಮಂಡಲ ಅಲಗೇರಿ” ತಂಡವರಿಂದ ಜಾನಪದ ಹಾಗೂ ಗೀಗೀ ಪದಗಳ ಮೂಲಕ ಜನಜಾಗೃತಿ ಮೂಡಿಸಲು ನಗರದ ಪ್ರಮುಖ ಬೀದಿ-ಬೀದಿಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ನಿಲೇಶ ದಿನಕರ ನಾಯ್ಕರವರು ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪುರಸಭೆಯ ಮುಖ್ಯಾಧಿಕಾರಿ ಬಿ ಪ್ರಹ್ಲಾದ, ಅಂಕೋಲಾ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸಂಪತ್ ಕುಮಾರ್, ಅಂಕೋಲಾ ತಾಲೂಕಾ ಮಂಡಲ ಅಧ್ಯಕ್ಷರಾದ ಸಂಜಯ ನಾಯ್ಕ ಹಾಗೂ ಬಿಜೆಪಿ ಪ್ರಮುಖರಾದ ಭಾಸ್ಕರ್ ಕೆ ನಾರ್ವೇಕರ ಕಾರ್ಯಕ್ರಮದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಸಂತೋಷ ಬಿ ನಾರ್ವೇಕರ, ನಗರ ಅಧ್ಯಕ್ಷರಾದ ನಾಗೇಂದ್ರ ನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಬಾನವಳಿಕರ್, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ರಾಜೇಶ್ವರಿ ಕೇಣೀಕರ, ತಾಲೂಕ ಮಂಡಲ ಉಪಾಧ್ಯಕ್ಷರಾದ ಅನುರಾಧ ನಾಯ್ಕ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಾರಾ ಗಾಂವ್ಕರ, ತಾಲೂಕ ರೈತ ಮೋರ್ಚಾ ಉಪಾಧ್ಯಕ್ಷರು ಬಾಲಕೃಷ್ಣ ನಾಯ್ಕ, ಕಾರ್ಯದರ್ಶಿ ಸಂದೀಪ ಪಡ್ತಿ, ಹಿಂದುಳಿದ ಮೋರ್ಚಾ ಕೋಶಾಧ್ಯಕ್ಷರಾದ ಸುಬ್ರಮಣ್ಯ ಗಾವಂಕರ, ಯುವಮೋರ್ಚಾ ಉಪಾಧ್ಯಕ್ಷ ಅಮಿತ ಕಾರ್ವಿ, ಕಾರ್ಯದರ್ಶಿ ನಾಗರಾಜ್ ನಾಯ್ಕ, ಭಾಸ್ಕರ್ ನಾಯ್ಕ, ಪದಾಧಿಕಾರಿಗಳಾದ ಅನಿಲ್ ಮಹಾಲೆ, ಗುರುಪ್ರಸಾದ್, ನವೀನ್, ಬಾಬುಗೌಡ,ಅಖಿಲ್, ರೂಪೇಶ್, ಹಾಗೂ ಪ್ರಮುಖರಾದ ಹೂವಾ ಕಂಡೆಕರ್, ಮುರುಳಿ ಬಂಟ ಹಾಗೂ ಇನ್ನಿತರ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಪ್ರಶಾಂತ ನಾಯಕ ವಂದಿಸಿದರು.

ವಿಸ್ಮಯ ನ್ಯೂಸ್, ವಿಲಾಸ ನಾಯ್ಕ, ಅಂಕೋಲಾ

[sliders_pack id=”1487″]
Exit mobile version