Follow Us On

WhatsApp Group
Uttara Kannada
Trending

ಕುಮಟಾ ವೈದ್ಯರ ವರದಿ ನೆಗೆಟಿವ್: ಕಡಿಮೆಯಾದ ಆತಂಕ

ಅಂಕೋಲಾ ವ್ಯಕ್ತಿಗೆ ಕರೊನಾ ಸೋಂಕು ಪ್ರಕರಣ

ಅನವಶ್ಯಕವಾಗಿ ಅಪಪ್ರಚಾರ ಮಾಡಬೇಡಿ
ಕರೊನಾ ವಾರಿಯರ್ಸ್‍ಗಳನ್ನು ಗೌರವಿಸಿ
ಡಾ.ಜಿ.ಜಿ.ಹೆಗಡೆ ಅವರ ಮನವಿ
ಅಂಕೋಲಾದಲ್ಲಿ ಮತ್ತಿಬ್ಬರಿಗೆ ಕರೊನಾ
ಸಹಾಯಕ ಆಯುಕ್ತರು ಹೇಳಿದ್ದೇನು?

ಕಾರವಾರ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟ ಬಳಿಕ ಆತನ ಟ್ರಾವೆಲ್ ಹಿಸ್ಟರಿ ಕಂಡು ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸೋಂಕು ಕಾಣಿಸಿಕೊಳ್ಳುವ ಮೊದಲು ಅಂಕೋಲಾದ ವ್ಯಕ್ತಿ ಕುಮಟಾದ ಕೆನರಾ ಹೆಲ್ತ್ ಕೇರ್ ಆಸ್ಪತ್ರೆ ಮತ್ತು ಗೋಕರ್ಣದ ಆಸ್ಪತ್ರೆಗೆ ತೆರಳಿ ನೀಡಿ ಚಿಕಿತ್ಸೆ ಪಡೆದಿದ್ದ. ಈ ಸುದ್ದಿ ಜೊತೆ ಕೆಲ ಗಾಳಿಸುದ್ದಿ ಸೇರಿ ಕಾಡ್ಗಿಚ್ಚಿನಂತೆ ಹಬ್ಬಿ ಕೆನರಾ ಹೆಲ್ತ್ ಕೇರ್ ಆಸ್ಪತ್ರೆಗೆ ಬರುವ ರೋಗಿಗಳು ಆತಂಕಗೊಂಡಿದ್ದರು. ಆದರೆ, ಇದೀಗ ಬಂದ ಸುದ್ದಿಯಿಂದಾಗಿ ಆತಂಕ ಕಡಿಮೆಮಾಡಿದ್ದು, ಆತನಿಗೆ ಚಿಕಿತ್ಸೆ ನೀಡಿದ್ದ ಕೆನರಾ ಹೆಲ್ತ್ ಕೇರ್ ನ ವೈದ್ಯರ ವರದಿ ಮತ್ತು ಆತನಿಗೆ ಟ್ರೀಟ್‍ಮೆಂಟ್ ನೀಡಿದ್ದ ಉಳಿದ ನಾಲ್ವರು ವೈದ್ಯರ ವರದಿ ನೆಗೆಟಿವ್ ಬಂದಿದೆ.

ಎರಡುದಿನಗಳ ಹಿಂದೆ ಅಂಕೋಲಾದ ವ್ಯಕ್ತಿಗೆ ಕರೊನಾ ಪಾಸಿಟಿವ್ ಬಂದ ಬಳಿಕ ನಮ್ಮ ಆಸ್ಪತ್ರೆಯ ಹೆಸರು ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಹರಿದಾಡಿತ್ತು. ಅಲ್ಲದೆ ಕೆಲ ಗಾಳಿಸುದ್ದಿಯಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಈ ಮೊದಲು ಟ್ರೀಟ್‍ಮೆಂಟ್ ಪಡೆದ ರೋಗಿಗಳು ಆತಂಕಗೊಂಡಿದ್ದರು. ಆದರೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆತನಿಗೆ ಚಿಕಿತ್ಸೆ ನೀಡಿದ ನಮ್ಮ ಆಸ್ಪತ್ರೆಯ ವೈದ್ಯರ ವರದಿ ನೆಗೆಟಿವ್ ಬಂದಿದೆ -ಡಾ. ಜಿ.ಜಿ.ಹೆಗಡೆ, ಪ್ರಮುಖರು, ಕೆನರಾ ಹೆಲ್ತ್ ಕೇರ್

ಕರೊನಾ ವಾರಿಯರ್ಸ್‍ಗಳು ಕರೊನಾ ಜೊತೆ ಹೋರಾಟ ಮಾಡುವ ಸೈನಿಕರು, ಇವರು ಯಾವಾಗಲು ಹೈ ರಿಸ್ಕ್ ನಲ್ಲಿರುತ್ತಾರೆ. ಅಂಕೋಲಾ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ನಡೆದ ಬೆಳವಣಿಗೆ ಬಗ್ಗೆ ಬೇಸರವಿದೆ. ಕೆಲವೆಡೆ ನಮ್ಮ ಆಸ್ಪತ್ರೆಯ ಹೆಸರು ಮತ್ತು ವೈದ್ಯರ ಹೆಸರು ಪ್ರಕಟವಾಗಿದೆ. ಆದರೆ, ಸರ್ಕಾರದ ನಿರ್ದೇಶದಂತೆ ಕೆಲವು ಮಾಹಿತಿಗಳು ಗೌಪ್ಯವಾಗಿರಬೇಕು. ನಾವು ಯಾರಿಗೆ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿದ್ದೇವೆ, ಅವರ ಬಗ್ಗೆ ಅಪಪ್ರಚಾರ ಮಾಡುವುದು ಎಷ್ಟರ ಮಟ್ಟಿಗೆ ಸರಿ.? ಕೊರನಾ ಹೊತೆ ಹೋರಾಟದಲ್ಲಿ ಹಲವು ಖಾಸಗಿ ಆಸ್ಪತ್ರೆಗಳು ಕೈಜೋಡಿಸಿವೆ. ಮತ್ತು ಕೈಜೋಡಿಸುತ್ತಿವೆ. ಈ ರೀತಿ ಗಾಳಿ ಸುದ್ದಿಯನ್ನು ಹಬ್ಬಿಸಿದ್ರೆ ವೈದ್ಯರು ಬೇರೆ ರೋಗಿಗಳನ್ನು ನೋಡುವುದು ಹೇಗೆ? ದಯವಿಟ್ಟು ಅನವಶ್ಯಕವಾಗಿ ಯಾರೂ ಅಪಪ್ರಚಾರ ಮಾಡಬೇಡಿ ಎಂದು ಕೆನರಾ ಹೆಲ್ತ್ ಕೇರ್ನ ಪ್ರಮುಖರಾದ ಡಾ. ಜಿ.ಜಿ.ಹೆಗಡೆಯವರು ಮನವಿ ಮಾಡಿದ್ದಾರೆ.

ಇದೇ ವೇಳೆ ಸೋಂಕಿತ ವ್ಯಕ್ತಿಯ ಮತ್ತು ಕುಟುಂಬಸ್ಥರ ಸಂಪರ್ಕಕ್ಕೆ ಬಂದಿದ್ದ ಸುಮಾರು 230ಕ್ಕೂ ಅಧಿಕ ಜನರ ಗಂಟಲು ದ್ರವದ ಮಾದರಿಯ ವರದಿ ಇಂದು ಬರುವ ನಿರೀಕ್ಷೆಯಿದೆ ಎನ್ನಲಾಗಿದೆ.

ಅಂಕೋಲಾದಲ್ಲಿ ಮತ್ತಿಬ್ಬರಿಗೆ ಕರೊನಾ: ಇನ್ನೊಂದೆಡೆ, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಕೋಲಾದ ಸೋಂಕಿತನ ಪತ್ನಿ ಮತ್ತು ಮಗಳಿಗೂ ಸೋಂಕು ದೃಢಪಟ್ಟ ಬಗ್ಗೆ ಮಾಹಿತಿ ಬಂದಿದೆ. ಸಂಜೆ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ನಲ್ಲಿ ಈ ಬಗ್ಗೆ ಅಧಿಕೃತಗೊಳ್ಳಲಿದೆ.

ವರಿಗೆ ಬಂದಿದೆ, ಇವರಿಗೆ ಬಂದಿದೆ. ಸೋಂಕಿತರ ಸಂಪರ್ಕದಲ್ಲಿದ್ದವರು ಅಲ್ಲಿ ತಿರುಗಾಡಿದ್ದಾರೆ. ಇಲ್ಲಿ ತಿರುಗಾಡಿದ್ದಾರೆ ಎಂದು ಜನರು ಅನಶ್ಯಕವಾಗಿ ಆತಂಕ ಪಡುವ ಅಗತ್ಯವಿಲ್ಲ. ಸೋಂಕಿತ ಮತ್ತು ಅವರ ಕುಟುಂಬದವರ ಸಂಪರ್ಕದಲ್ಲಿದ್ದ ಪಕ್ಕದ ಮನೆಯವರಿಗೆ ನೆಗೆಟಿವ್ ಬಂದ ಉದಾಹರಣೆಯಿದೆ. ಈಗ ಅಂಕೋಲಾದಲ್ಲೂ ಸೋಂಕಿತ ವ್ಯಕ್ತಿಯ ಮತ್ತು ಕುಟುಂಬದವರ ಸಂಪರ್ಕದಲ್ಲಿದ್ದ ಪಕ್ಕದಮನೆಯವರಿಗೆ ನೆಗೆಟಿಟ್ ಬಂದಿದೆ. ಸೋಂಕಿತರ ಸಂಪರ್ಕದಲ್ಲಿದ್ದವರು ಬಂದು ಹೋದ ಮಾತ್ರ ಆತಂಕ ಪಡುವ ಅಗ್ಯವಿಲ್ಲ. ಗಾಳಿಸುದ್ದಿಯನ್ನು ನಂಬಬೇಡಿ. ಯಾರೂ ಭಯಪಡುವ ಅಗತ್ಯವಿಲ್ಲ. ಸರ್ಕಾರ, ಜಿಲ್ಲಾಡಳಿತ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕೈಗೊಂಡಿದೆ. – ಅಜಿತ್ ಎಮ್, ಸಹಾಯಕ ಆಯುಕ್ತರು, ಕುಮಟಾ

ವಿಸ್ಮಯ ನ್ಯೂಸ್, ಕುಮಟಾ & ಅಂಕೋಲಾ

[sliders_pack id=”1487″]

Back to top button