ಕಾಲುಜಾರಿ ಹಳ್ಳದಲ್ಲಿ ಬಿದ್ದು ಸಾವು
ಮೃತ ವ್ಯಕ್ತಿ ನಾಗರಾಜ ನಾಯ್ಕ
[sliders_pack id=”1487″]
ಅಂಕೋಲಾ: ಏಡಿ ಮೀನು ಹಿಡಿಯಲು ಹೋದ ವ್ಯಕ್ತಿಯೊರ್ವ ನೀರು ಪಾಲಾಗಿ, ಶವವಾಗಿ ಪತ್ತೆಯಾದ ಘಟನೆ ಗುರುವಾರ ನಡೆದಿದೆ. ನಾಗರಾಜ ಗಣಪತಿ ನಾಯ್ಕ (38) ಈತನೇ ಮೃತ ದುರ್ದೈವಿಯಾಗಿದ್ದು ಕಳೆದ ಮಂಗಳವಾರ ತನ್ನ ಗೆಳಯರೊಂದಿಗೆ ಏಡಿ ಮೀನು ಹಿಡಿಯಲು ನವಗದ್ದೆಯ ಹಳ್ಳವೊಂದರ ಬಳಿ ಹೋಗಿದ್ದ ಎನ್ನಲಾಗಿತ್ತು, ಆ ವೇಳೆ ಕಾಲು ಜಾರಿ ಆಯಾ ತಪ್ಪಿ ಹಳ್ಳಕ್ಕೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ ಕುರಿತು ಮೃತನ ಸಹೋದರ ಪೋಸ್ಟ್ ಬಾಳೆಗುಳಿ ನಿವಾಸಿ ಸಂತೋಷ ನಾಯ್ಕ ಪೋಲೀಸ್ ದೂರು ನೀಡಿದ್ದರು.
ಬುಧುವಾರ ಘಟನಾ ಸ್ಥಳದ ಸುತ್ತ-ಮುತ್ತ ಪೋಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದವರು ಸ್ಥಳೀಯರ ಸಹಕಾರದಲ್ಲಿ ಬಹು ಹೊತ್ತಿನವರೆಗೆ ಶೋಧನಾ ಕಾರ್ಯ ನಡೆಸಿದ್ದರಾದರೂ, ಜೋರಾಗಿ ಸುರಿಯುತ್ತಿರುವ ಮಳೆ ಮತ್ತು ಹಳ್ಳದ ನೀರಿನ ಹಿಚ್ಚಿನ ರಭಸದಿಂದಾಗಿ ಕಾರ್ಯಾಚರಣೆ ಮೊಟಕುಗೊಳಿಸುವಂತಾಯಿತು ಎನ್ನಲಾಗಿದೆ. ಘಟನಾ ಸ್ಥಳದಿಂದ ಸುಮಾರು ೩ ಕಿ.ಲೋ ಮೀಟರ್ ದೂರದ ಕ್ರಷರ್ ಹಿಂಬದಿಯ ಚಿಕ್ಕ ಸೇತುವೆವೊಂದರ ಬಳಿ ಶವವೊಂದು ಸಿಕ್ಕಿ ಹಿಡಿದಿರುವುದನ್ನು ಗಮನಿಸಿದ ಸ್ಥಳೀಯರು ಇಲಾಖೆಗೆ ಮಾಹಿತಿ ತಿಳಿಸಿದ್ದು, ಶವದ ಗುರುತು ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾಗರಾಜ ನಾಯ್ಕ ಈತನದ್ದೇ ಎಂದು ಪತ್ತೆಯಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ