Uttara Kannada
Trending

ಉತ್ತರಕನ್ನಡದಲ್ಲಿ ಇಂದು ಕರೊನಾ ಸ್ಫೋಟ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕರೊನಾ ತನ್ನ ವಿರಾಟರೂಪ ತಾಳಿದಂತೆ ಕಂಡುಬರುತ್ತಿದ್ದು, ಇಂದು 75ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಬಂದಿದೆ. ನಿನ್ನೆ ದಾಖಲಾದ 13 ಪ್ರಕರಣದಿಂದ ಜಿಲ್ಲೆಯ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಜಿಲ್ಲೆಯಲ್ಲಿ ಇಂದು ಗರಿಷ್ಠ ಸಂಖ್ಯೆಯಲ್ಲಿ ಕರೊನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ.

ಕುಮಟಾದಲ್ಲಿ ಇಂದು ಹೆಚ್ಚಿನ ಪ್ರಕರಣ ದಾಖಲು?
ಕುಮಟಾದಲ್ಲಿ ನಿವೃತ್ತ ಪೊಲೀಸ್ ಸಿಬ್ಬಂದಿಗೂ ಸೋಂಕುದೃಢಪಟ್ಟಿದೆ ಎನ್ನಲಾಗಿದೆ. ಅಲ್ಲದೆ, ಸೋಂಕು ದೃಢಪಟ್ಟ ಖಾಸಗಿ ಆಸ್ಪತ್ರೆಯ ವೈದ್ಯರ, ಕುಟುಂಬದ ಕೆಲ ಸದಸ್ಯರಲ್ಲೂ ಪಾಸಿಟಿವ್ ಕಾಣಿಸಿಕೊಂಡಿದೆ ಎನ್ನಲಾಗಿದೆ. ಮಿರ್ಜಾನ್‍ನಲ್ಲೂ ಸೋಂಕಿನ ಪ್ರಕರಣ ದೃಢಪಟ್ಟಿದೆ ಎಂಬ ಮಾಹಿತಿ ಬಂದಿದೆ.

ಹೊನ್ನಾವರದ ಮಾಳಕೋಡ ಮತ್ತು ಅನಂತವಾಡಿಯಲ್ಲಿ ಕರೊನಾ ಪಾಸಿಟಿವ್
ಮಹಾರಾಷ್ಟ್ರದಿಂದ ಆಗಮಿಸಿ ಹೋಮ್‍ಕ್ವಾರಂಟೈನ್‍ನಲ್ಲಿದ್ದ ಅನಂತವಾಡಿಯ 26 ವರ್ಷದ ಯುವಕನಲ್ಲಿ ಮತ್ತು ಆಂಧ್ರಪ್ರದೇಶದಿಂದ ಆಗಮಿಸಿ, ಖಾಸಗಿ ಹೊಟೇಲ್‍ನಲ್ಲಿ ಕ್ವಾರಂಟೈನ್‍ಗೆ ಒಳಗಾಗಿದ್ದ ಮಾಳಕೋಡ ಮೂಲದ 19 ವರ್ಷದ ಯುವಕನಲ್ಲಿ ಕರೊನಾ ದೃಢಪಟ್ಟಿದೆ. ಈ ಕುರಿತ ನಿಖರ ಮಾಹಿತಿ ಮತ್ತು ಅಂಕಿಸಂಖ್ಯೆ ಸಂಜೆ ಪ್ರಕಟವಾಗುವ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್‍ನಲ್ಲಿ ಅಧಿಕೃತವಾಗಲಿದ್ದು, ಅಂತಿಮವಾಗಲಿದೆ.

ಹೆಚ್ಚೆಚ್ಚು ಪ್ರಕರಣ ದಾಖಲಾಗಿದೆ ಎಂಬ ಕಾರಣಕ್ಕೆ ಯಾರೂ ಆತಂಕಪಡುವ ಅಗತ್ಯವಿಲ್ಲವಾಗಿದ್ದು, ಟೆಸ್ಟಿಂಗ್ ಹೆಚ್ಚು ಆಗಿದ್ದರಿಂದ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎನ್ನಲಾಗಿದೆ. ಸಾರ್ವಜನಿಕರು ಆದಷ್ಟು ಅನವಶ್ಯಕ ಓಡಾಟ ಕಡಿಮೆಮಾಡಬೇಕಿದ್ದು, ಸಾಮಾಜಿಕ ಅಂತರ ನಿಯಮವನ್ನು ಪಾಲಿಸಬೇಕಿದೆ. ಸ್ಯಾನಿಟೈಝರ್, ಮಾಸ್ಕ್ ಅನ್ನು ತಪ್ಪದೇ ಬಳಸಬೇಕಿದೆ.

Stay Home Stay Safe

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button