ಕುಮಟಾದಲ್ಲಿಂದು 15 ಪಾಸಿಟಿವ್?

ಕತಗಾಲಿನ ಉಪ್ಪಿನಪಟ್ಟಣಕ್ಕೂ ವ್ಯಾಪಿಸಿದ ಸೋಂಕು
ಮಿರ್ಜಾನ್, ವಿವೇಕನಗರದಲ್ಲಿ ಹಲವು ಪಾಸಿಟಿವ್

[sliders_pack id=”1487″]

ಕುಮಟಾ: ಕುಮಟಾ ತಾಲೂಕಿನಲ್ಲಿ ಇಂದು 15 ಕರೊನಾ ಪ್ರಕರಣ ದಾಖಲಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಕುಮಟಾ ತಾಲೂಕಿನ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಲ್ಲಿ ಕಳೆದೆರಡು ದಿನಗಳ ಹಿಂದೆ ಕರೊನಾ ದೃಢಪಟ್ಟಿತ್ತು, ಇದರ ಬೆನ್ನಲ್ಲೆ ವೈದ್ಯರ ಪ್ರಾಥಮಿಕ ಸಂಪರ್ಕಕ್ಕೆ ಬಂದಂತಹ ಕುಟುಂಬಸ್ಥರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಇದೀಗ ಇವರ ಕುಟುಂಬದ 28 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಇನ್ನುಳಿದಂತೆ ಕುಮಟಾ ತಾಲೂಕಿನ ಮಿರ್ಜಾನಿನ 1 ವರ್ಷದ ಮಗು, ಮಿರ್ಜಾನಿನ 6 ವರ್ಷದ ಮಗು, ಮಿರ್ಜಾನಿನ 7 ವರ್ಷದ ಮಗು, ಮಿರ್ಜಾನಿನ 44 ವರ್ಷದ ಪುರುಷ, ಮಿರ್ಜಾನಿನ 28 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ. ಕುಮಟಾ ವಿವೇಕ ನಗರದ 33 ವರ್ಷದ ಪುರುಷ, ವಿವೇಕ ನಗರದ 23 ವರ್ಷದ ಯುವತಿ, ವಿವೇಕ ನಗರದ 53 ವರ್ಷದ ಪುರುಷ, ಮಿರ್ಜಾನಿನ 8 ವರ್ಷದ ಬಾಲಕಿ, ಮಿರ್ಜಾನಿನ 4 ವರ್ಷದ ಮಗು, ಮಿರ್ಜಾನಿನ 3 ವರ್ಷದ ಮಗು, ಉಪ್ಪಿನ ಪಟ್ಟಣದ 36 ವರ್ಷದ ಪುರುಷ, ಮಂಗೋಡ್ಲಿನ 49 ವರ್ಷದ ಪುರುಷ, ವಿವೇಕ ನಗರದ 3 ವರ್ಷದ ಮಗುವಿನಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಈ 15 ಸೋಂಕಿತರು ಸಹ ಕುಮಟಾ ತಾಲೂಕಾ ವ್ಯಾಪ್ತಿಯವರೇ ಆಗಿದ್ದು, ಯಾರೂ ಸಹ ಹೊರ ದೇಶ ಅಥವಾ ಹೊರ ರಾಜ್ಯಗಳಿಂದ ಬಂದವರಲ್ಲ ಎನ್ನಲಾಗಿದೆ. ಯಾರು ಭಯಪಡುವ ಅಗತ್ಯವಿಲ್ಲವಾಗಿದ್ದು, ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್‍ನಲ್ಲಿ ಈ ಕುರಿತ ನಿಖರ ಅಂಕಿ-ಸಂಖ್ಯೆ ಹೊರಬೀಳಲಿದೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ, ಕುಮಟಾ.

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Exit mobile version