ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು: ಎರಡು ಮೊಬೈಲ್ ಹ್ಯಾಂಡ್ ಸೆಟ್, ನಗದು ಹಣ ಕಳ್ಳತನ

ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆ: ಆರೋಪಿ ವಶಕ್ಕೆ

ಅಂಕೋಲಾ: ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು ಎರಡು ಮೊಬೈಲ್ ಹ್ಯಾಂಡ್ ಸೆಟ್ ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದೆ.

ಜಿಂಕೆಯನ್ನು ಕೊಂದು ಕೋಡು , ಕೊಂಬು, ಮಾಂಸ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

ಅವರ್ಸಾ ಗ್ರಾಮದಲ್ಲಿ ಸಂಜೀವ ಸುಧಾಕರ ನಾಯ್ಕ ಎಂಬಾತ ಮೊಬೈಲ್ ಪೋನ್ ಮಾರಾಟದ ಅಂಗಡಿ ನಡೆಸುತ್ತಿದ್ದು ಬುಧವಾರ ರಾತ್ರಿ ಅಂಗಡಿ ಮುಚ್ಚಿ ಮನೆಗೆ ಹೋದ ನಂತರ ಅಂಗಡಿಯೊಳಗೆ ಪ್ರವೇಶ ಮಾಡಿ ಸುಮಾರು 12 ಸಾವಿರ ರೂಪಾಯಿ ಬೆಲೆಯ ರಿಯಲ್ ಮಿ ಸಿ2 ಮಾದರಿಯ 1 ಫೋನ್ ,10 ಸಾವಿರ ಮೌಲ್ಯದ ಎಂ.ಐ, ನೋಟ್ 4 ಮಾದರಿಯ 1 ಪೋನ್ ಕಳ್ಳತನ ನಡೆಸಿದ್ದು ಡ್ರಾವರ ನಲ್ಲಿ ಇದ್ದ 1 ಸಾವಿರ ನಗದು ಹಣ ಕಳ್ಳತನ ಮಾಡಿದ್ದಾರೆ.

ಕಳ್ಳತನ ಮಾಡಿದ ಓರ್ವ ಆರೋಪಿ ಅವರ್ಸಾ ಗ್ರಾಮದ ಸಿದ್ಧಾರ್ಥ ನಾಯ್ಕ ಎಂದು ತಿಳಿದು ಬಂದಿದ್ದು ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಳ್ಳರ ಚಲನ – ವಲನ ಪತ್ರೆಯಾಗಿದ್ದು,ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳತನದ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version