ಶಿರಸಿ: ಹಿಂದೂರಾಷ್ಟç ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ 2 ದಿನಗಳ ಉತ್ತರಕನ್ನಡ ಜಿಲ್ಲಾ ಹಿಂದೂರಾಷ್ಟ್ರ ಅಧಿವೇಶನವು ಇದೇ ನವೆಂಬರ್ 19 ಮತ್ತು 20 ರಂದು ನಗರದ ಶ್ರೀ ವೀರಭದ್ರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಜಿಲ್ಲೆಯ ಗೋಕರ್ಣ, ಭಟ್ಕಳ, ಕುಮಟಾ, ಸಿದ್ದಾಪುರ, ಬನವಾಸಿ, ಮುಂಡಗೋಡು, ಶಿರಸಿ ಹಾಗೂ ಕಾರವಾರದಿಂದ ಅನೇಕ ಸಂಘಟನೆಗಳ ಮುಖ್ಯಸ್ಥರು, ದೇವಸ್ಥಾನದ ಧರ್ಮದರ್ಶಿಗಳು, ಮಹಿಳಾ ಮಂಡಳಿಯ ಮುಖ್ಯಸ್ಥರು, ಸಾಮಾಜಿಕ ಹೋರಾಟಗಾರರು ಈ ಅಧಿವೇಶನದಲ್ಲಿ ಉಪಸ್ಥಿತರಿದ್ದರು.
ಮದಿರೆ ಮತ್ತಿನಲ್ಲಿ ಶಿಕ್ಷಕನ ರಂಪಾಟ! ಅಂಗಡಿ ಮುಂದೆ ಬಿದ್ದು ತೂರಾಟ
ಹಿಂದೂರಾಷ್ಟ್ರ ಸ್ಥಾಪನೆಯ ಅವಶ್ಯಕತೆ ಬಗ್ಗೆ ಹಾಗೂ ಹಿಂದೂ ಧರ್ಮ ಮತ್ತು ರಾಷ್ಟçದ ಮೇಲೆ ಬಂದಿರುವ ಅನೇಕ ಆಘಾತಗಳ ಕುರಿತು ಚಿಂತನ ಮಂಥನ ಮಾಡಲಾಯಿತು. ಈ ಸಂಧರ್ಭದಲ್ಲಿ ರಾಷ್ಟç ಧರ್ಮದ ಕಾರ್ಯ ಮಾಡುತ್ತಿರುವ ಅನೇಕರು ತಮ್ಮ ಆತ್ಮಕಥನವನ್ನು ಮಾಡಿಕೊಂಡರು. ಅಲ್ಲದೇ ಭಾರತವನ್ನು ಹಿಂದೂರಾಷ್ಟ್ರ ಎಂದು ಘೋಷಣೆ ಮಾಡಲು ಪ್ರತಿಯೊಂದು ಹಿಂದೂ ಸಂಘಟನೆಗಳು ಹಾಗೂ ಹಿಂದೂಗಳು ತನು, ಮನ, ಧನದಿಂದ ಪ್ರಯತ್ನ ಮಾಡುವುದು ತುಂಬಾ ಅವಶ್ಯಕವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯದ ಸಮನ್ವಯಕರಾದ ಶ್ರೀ ಗುರುಪ್ರಸಾದ ಗೌಡ ಅವರು ಕರೆ ನೀಡಿದರು.
ವಿಸ್ಮಯ ನ್ಯೂಸ್, ಶಿರಸಿ