ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಒಳನುಗ್ಗಿ ಚಿನ್ನಾಭರಣ ಕದ್ದಿದ್ದ ಕಳ್ಳರು: ಸಿಸಿಟಿವಿಯಲ್ಲಿ ಸಿಕ್ಕಿತು ಸುಳಿವು: ಆರೋಪಿಗಳು ಅಂದರ್

ಭಟ್ಕಳ: ಬಂದರ್ ರೋಡ್ 2ನೇ ಕ್ರಾಸ್ ನಲ್ಲಿ ಮನೆ ಮುಂದೆ ನಿಲ್ಲಿಸಿಟ್ಟ ಬುಲೆಟ್ ಬೈಕ್ ಕಳ್ಳತನ ಮಾಡಿಕೊಂಡು ಹೋದ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಲು ಭಟ್ಕಳ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನ ಮಾಡಿದ ಆರೋಪಿಗಳು ಉಡುಪಿ ಮೂಲದ ಕುಂಜೆಬೆಟ್ಟ ನಿವಾಸಿ ಇಮ್ರಾಜ್ ಉಸ್ಮಾನ್ ಸಾಹೇಬ್ ಹಾಗೂ ಬಂಟ್ವಾಳ ಫರಂಗಿಪೇಟೆ ಮೂಲದ ಮಹ್ಮದ ನೌಪಾಲ್ ಎಂದು ತಿಳಿದು ಬಂದಿದೆ.

ಸರ್ಕಾರಿ ಉದ್ಯೋಗಾವಕಾಶ:SSLC ಪಾಸಾದವರಿಗೆ ಅವಕಾಶ: ಮಾಸಿಕ ಸಂಬಳ 60 ಸಾವಿರ

ಇವರು ಮಾರ್ಚ್ 14ರ ನಸುಕಿನ ವೇಳೆ ಬಂದರ ರೋಡ್ 2ನೇ ಕ್ರಾಸ್ ನಲ್ಲಿರುವ ನೀಲಾವರ್ ಅಪಾರ್ಟ್ ಮೆಂಟ್ ಮುಂದೆ ನಿಲ್ಲಿಸಿಟ್ಟ ಶಝೀಬ್ ಹಶಿಮ್ ಎಂಬುವರ ಬುಲೆಟ್ ಬೈಕ್ ಕಳ್ಳತನ ಮಾಡಿದ್ದರು. ಮನೆಯವರು ಬೆಳ್ಳಿಗ್ಗೆ ಎದ್ದು ನೋಡಿದಾಗ ಮನೆಮುಂದೆ ನಿಲ್ಲಸಿಟ್ಟ ಬೈಕ್ ಕಳ್ಳತನವಾಗಿರುವುದು ತಿಳಿದು ಬಂದಿತ್ತು.

ಪ್ರಕರಣ ದಾಖಲಿಸಿಕೊಂಡ ಭಟ್ಕಳ ನಗರ ಠಾಣೆಯ ಪೊಲೀಸರು ತನಿಕೆ ಕೈಗೊಂಡ ವೇಳೆ, ಶಿರೂರು ಟೋಲ್ ಗೇಟ್ ಬಳಿ ಕಾರೊಂದಕ್ಕೆ ಕಳ್ಳತನ ಮಾಡಿದ ಬುಲೆಟ್ ಕಟ್ಟಿಕೊಂಡು ಹೋಗುತ್ತಿರುವ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಳಿಕ ಕಳ್ಳರ ಜಾಡು ಹಿಡಿದ ಪೊಲೀಸರು ಆರೋಫಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version