Follow Us On

WhatsApp Group
Focus News
Trending

ಕವಲಕ್ಕಿಯ ಶ್ರೀ ಭಾರತೀಯಲ್ಲಿ ವಿಶ್ವಯೋಗ ದಿನ : ಯೋಗ ಗುರುವಿಗೆ ಸನ್ಮಾನ

ಹೊನ್ನಾವರ: ಯೋಗಾಭ್ಯಾಸದಿಂದ ಚಂಚಲ ಮನಸ್ಸನ್ನು ನಿಯಂತ್ರಿಸಲು ಸಾಧ್ಯ, ಓಂಕಾರದಿAದಜ್ಞಾನ ವೃದ್ಧಿಯಾಗುತ್ತದೆ, ಯೋಗಮಾರ್ಗವನ್ನು ಅನುಸರಿಸಿದರೆ ವಿದ್ಯಾರ್ಥಿಗಳ ಸರ್ವೋತ್ತೊಮುಖ ಬೆಳವಣಿಗೆಆಗುತ್ತದೆಎಂದುಯೋಗಗುರು ,ನಿವೃತ್ತದೈಹಿಕ ಶಿಕ್ಷಕರಾದ ಶ್ರೀ ಎಸ್.ಎನ್.ಹೆಗಡೆಕರ್ಕಿನುಡಿದರು. ಅವರುಕವಲಕ್ಕಿಯ ಶ್ರೀ ಭಾರತೀಆಂಗ್ಲ ಮಾಧ್ಯಮ ಶಾಲೆಯಲ್ಲಿಜರುಗಿದ ವಿಶ್ವಯೋಗದಿನ ಹಾಗೂ ಯೋಗಗುರುವಿಗೆ ಸನ್ಮಾನಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿಮಾತನಾಡಿದರು.ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ ಶ್ರೀ ವಿ.ಜಿ.ಹೆಗಡೆಗುಡ್ಗೆಯವರು ಮಾತನಾಡಿಆರೋಗ್ಯವಿಲ್ಲದಿದ್ದರೆ ಬದುಕುಅಪೂರ್ಣ , ಅರ್ಥಪೂರ್ಣ ಬದುಕಿಗೆಯೋಗಾಭ್ಯಾಸಅವಶ್ಯಕಎಂದುಕರೆ ನೀಡಿದರು.

ಆಡಳಿತಾಧಿಕಾರಿ ಶ್ರೀ ಎಂ.ಎಸ್.ಹೆಗಡೆಗುಣವoತೆಯವರು ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವಯೋಗದಿನದ ಮಹತ್ವ ಹಾಗೂ ಯೋಗಾಭ್ಯಾಸದಿಂದಾಗುವ ಪ್ರಯೋಜನಗಳನ್ನು ತಿಳಿಸಿದರು. ಇದೆ ಸಂದರ್ಭದಲ್ಲಿಯೋಗಗುರು ಶ್ರೀ ಎಸ್.ಎನ್ ಹೆಗಡೆಯವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್‌ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ಶಿಕ್ಷಕಿ ಸಂಗೀತಾ ಹೆಗಡೆಕಾರ್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾರ್ಥಿನಿ ಜೊಸ್ಲಿನ್ ಲೋಪಿಸ್ ಸ್ವಾಗತಿಸಿದಳು. ದೀಕ್ಷಾ ಹೆಗಡೆವಂದಿಸಿದಳು. ವಿಂದ್ಯಾ ಹೆಗಡೆ ಹಾಗೂ ಸಿಂಚನಾ ಗೌಡ ಪ್ರಾರ್ಥಿಸಿದರು. ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಗೆ ಯೋಗಾಭ್ಯಾಸವನ್ನು ಮಾಡಿಸಲಾಯಿತು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button