ಕಾರವಾರ: ಇಲ್ಲಿನ ಕದಂಬ ನೌಕಾನೆಲೆಯ ತೇಜ್ ಹೆಸರಿನ ಟಗ್ ಬೋಟ್ ನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆಕಸ್ಮಿಕವಾಗಿ ಇಂಜಿನ್ ಗೆ ಬೆಂಕಿ ತಗುಲಿ ನೌಕಾನೆಲೆಯ ಡಾಕ್ ಯಾರ್ಡ್ ಗೆ ಬೆಂಕಿ ಆವರಿಸಿತ್ತು. ಘಟನೆಯಲ್ಲಿ ನೌಕಾನೆಲೆಯ ತೇಜ್ ಟಗ್ ಬೋಟ್ ನ ಒಳಭಾಗದ ಇಂಜಿನ್ ಸಂಪೂರ್ಣ ಸುಟ್ಟುಹೋಗಿದ್ದು, ದೊಡ್ಡ ಮಟ್ಟದಲ್ಲಿ ನೌಕಾನೆಲೆಯ ಡಾಕ್ ಯಾರ್ಡ್ ನಲ್ಲಿ ಹೊಗೆ ಆವರಿಸಿತ್ತು. ತೇಜ್ ಹೆಸರಿನ ಈ ಟಗ್ ಬೋಟ್ ಅನ್ನು ನೌಕಾ ಹಡಗುಗಳನ್ನು ಡಾಕ್ ಗೆ ಎಳದು ತರಲು ಉಪಯೋಗಿಸಲಾಗುತ್ತದೆ. ನೌಕಾ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಾರವಾರ ಅಗ್ನಿಶಾಮಕ ಸಿಬ್ಬಂದಿಗಳಿoದ ಬೆಂಕಿ ನಂದಿಸಿದ್ದು, ಇದರಿಂದಾಗಿ ದೊಡ್ಡ ಮಟ್ಟದ ಅನಾಹುತ ತಪ್ಪಿದೆ.
ವಿಸ್ಮಯ ನ್ಯೂಸ್, ಕಾರವಾರ