ಸಿದ್ದಾಪುರ: ಸರಕಾರಿ ಪಡಾ ಜಮೀನಲ್ಲಿ ಅತಿಕ್ರಮಣ ಮಾಡಿ ಅಡಿಕೆ ಗಿಡ ಬೆಳಸಿದ್ವಿ, ಕೋರ್ಲಕೈ ಪಂಚಾಯತ್ ನವರು, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಬಂದು ಗಿಡ ಕಿತ್ತು ನಮಗೆ ಅನ್ಯಾಯ ಮಾಡಿದ್ದಾರೆ. ಸರಕಾರವೇ ನ್ಯಾಯ ಒದಗಿಸುವಂತೆ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಪದ್ಮಾವತಿ ಮಡಿವಾಳ ಆಗ್ರಹಿಸಿದ್ದಾರೆ. ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಅತಿಕ್ರಮಣ ಮಾಡಿ ದನಕರುಗಳು ಮೇಯುಸುತ್ತಿದ್ದೇವು. ಕಳೆದ ಹತ್ತು ವರ್ಷಗಳ ಹಿಂದೆ ಅಡಿಕೆ ನೆಟ್ಟಿದ್ದೇವು. ಇದೀಗ ಪಂಚಾಯಿತಿಯವರು ನಮ್ಮ ಗಮನಕ್ಕೆ ತಾರದೇ ಏಕಾಏಕಿ ಚರಂಡಿ ತೆಗೆದು, ಅಡಿಕೆ ಮರಗಳನ್ನು ಕಿತ್ತು ಬೇರೆಡೆ ಸಾಗಿಸಿದ್ದಾರೆ. ರಾಜಕೀಯ ಕುತಂತ್ರದಿoದ ಈ ಜಾಗದಲ್ಲಿ 20 ಗುಂಟೆ ಶ್ಮಶಾನದ ಜಾಗಕ್ಕೆ ಗುರುತು ಮಾಡಿದ್ದು ನಮಗೆ ಹಲವು ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ. ನಾವು ಈ ಕುರಿತು ತಹಶೀಲ್ದಾರ, ಜಿಲ್ಲಾ ಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋನವಾಗಿದೆ.ಈಗಿರುವ ಅನ್ಯಾಯ ಸರಿಪಡಿಸಿ ಸೂಕ್ತ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ತಿಮ್ಮಪ್ಪ ಮಡಿವಾಳ ಮಾತನಾಡಿ , ಕಾಗೇರಿ ಶಾಸಕರಾಗಿದ್ದಾಗ ಶ್ಮಶಾನದ ಜಾಗವನ್ನು ಸಾರ್ವಜನಿಕ ರಿಗೆ ತೊಂದರೆ ಯಾಗದ ರೀತಿಯ ಗುರುತು ಮಾಡಲು ತಿಳಿಸಲಾಗಿತ್ತು. ತಾಲೂಕ ಮಟ್ಟದ ಕಾಂಗ್ರೆಸ್ ನ ರಾಜಕೀಯ ಮುಖಂಡರು ಹಾಗೂ ಸ್ಥಳೀಯ ಕೆಲ ನಾಯಕರುಗಳಿಂದ ಈ ರೀತಿಯ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದು ದೂರಿದರು.
ವಿಸ್ಮಯ ನ್ಯೂಸ್, ಸಿದ್ದಾಪುರ