ಅಂಕೋಲಾ: ಡಾ. ದಿನಕರ ದೇಸಾಯಿ (Dinakara Desai)ಸ್ಮಾರಕ ಪ್ರತಿಷ್ಠಾನ ಹಮ್ಮಿಕೊಂಡಿರುವ ‘ದಿನಕರ ಮಾಸಾಚರಣೆ’ಯ ಪ್ರಸಕ್ತ ವರ್ಷದ ಉದ್ಘಾಟನಾ ಸಮಾರಂಭ ಬೆಳಂಬಾರದ ಶ್ರೀ ಮಂಜುನಾಥ ಸ್ವಾಮಿ ಪ್ರೌಢ ಶಾಲೆಯ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರತಿಷ್ಠಾನದ ಉಪಾಧ್ಯಕ್ಷ ಡಾ. ರಾಮಕೃಷ್ಞ ಗುಂದಿ ದಿನಕರ ದೇಸಾಯಿ ಎಸಗಿದ ಅಕ್ಷರ ಕ್ರಾಂತಿ ಜಿಲ್ಲೆಯ ಅನೇಕರ ಬಾಳಿಗೆ ಬೆಳಕಾಗಿ ಒದಗಿದ್ದು ಇಲ್ಲಿನ ಜನತೆ ಅವರನ್ನು ಸದಾ ಸ್ಮರಿಸಬೇಕಿದೆ ಎಂದರು.
ಉಪನ್ಯಾಸಕ ಉಲ್ಲಾಸ ಹುದ್ದಾರ ದೇಸಾಯಿಯವರ (Dinakara Desai) ‘ನಾ ಕಂಡ ಪಡುವಣ’ ಪ್ರವಾಸ ಕಥನದ ಹೂರಣವನ್ನು ಸ್ವಾರಸ್ಯಕರವಾಗಿ ಮಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಮೋಹನ ಹಬ್ಬು ವಹಿಸಿದ್ದರು. ಪ್ರಾರಂಭದಲ್ಲಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮೀರಾ ನಾಯಕ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಪ್ರತಿಷ್ಠಾನದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಶಾಲೆಯ ವಚನ ಮಕ್ಕಳು ದೇಸಾಯಿಯವರ ಕವನಗಳನ್ನು ಹಾಡಿ, ಚುಟುಕವಾಚನ (dinakara desai chutukugalu) ಮಾಡಿದರು. ಪ್ರತಿಷ್ಠಾನದ ಸದಸ್ಯ ಜೆ .ಪ್ರೇಮಾನಂದ ಹಾಗೂ ಶಿಕ್ಷಕಿ ವೀಣಾ ನಾಯಕ ಉಪಸ್ಥಿತರಿದ್ದರು. ರಾಘವೇಂದ್ರ ಭಟ್ ವಂದಿಸಿದರು. ಜಗದೀಶ್ ಗೌಡರ್ ನಿರೂಪಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ