ಜಿಲ್ಲೆಯಲ್ಲಿಂದು ಕರೊನಾದಿಂದ ಇಬ್ಬರ ಸಾವು

ಉತ್ತರಕನ್ನಡದಲ್ಲಿ 59 ಕರೊನಾ ಕೇಸ್ ದೃಢ
43 ಮಂದಿ ಗುಣಮುಖರಾಗಿ ಬಿಡುಗಡೆ

[sliders_pack id=”3498″]

ಕಾರವಾರ: ಉತ್ತರಕನ್ನಡದಲ್ಲಿ ಗುರುವಾರ 59 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಹಳಿಯಾಳದಲ್ಲಿ ಅತಿಹೆಚ್ಚು ಅಂದರೆ 18 ಕೇಸ್ ದೃಢಪಟ್ಟಿದೆ. ಭಟ್ಕಳ 8, ಸಿದ್ದಾಪುರ 8, ಕುಮಟಾ, 7, ಅಂಕೋಲಾ 4, ಕಾರವಾರ ಮತ್ತು ಹೊನ್ನಾವರದಲ್ಲಿ ತಲಾ 1 ಕೇಸ್ ದೃಢಪಟ್ಟಿದೆ. ಶಿರಸಿ 6, ಜೋಯ್ಡಾ 4, ಮುಂಗಡೋಡಿನಲ್ಲಿ 2 ಕೇಸ್ ದಾಖಲಾಗಿದೆ.

ಇದೇ ವೇಳೆ, ಇಂದು 43 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ. ಕಾರವಾರದಲ್ಲಿ 6, ಅಂಕೋಲಾದಲ್ಲಿ 3, ಹೊನ್ನಾವರದ 4, ಭಟ್ಕಳದ 5, ಶಿರಸಿ 5, ಹಳಿಯಾಳದ 8, ಯಲ್ಲಾಪುರದ 10, ಹಾಗೂ ಮುಂಡಗೋಡಿನ 2 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು 59 ಕರೊನಾ ಕೇಸ್ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3068ಕ್ಕೆ ಏರಿಕೆಯಾಗಿದೆ. ಇದುವರೆಗು 2113 ಮಂದಿ ಗುಣಮುಖರಾಗಿದ್ದರೆ 926 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 131 ಸೋಂಕಿತರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಇಬ್ಬರ ಸಾವು: 28ಕ್ಕೆ ಏರಿದ ಸಾವಿನ ಸಂಖ್ಯೆ:
ಜಿಲ್ಲೆಯಲ್ಲಿ ಕರೊನಾ ಸೋಂಕಿನಿoದ ಮೃತಪಟ್ಟವರ ಸಂಖ್ಯೆಯೂ ಹೆಚ್ಚುತ್ತಿದ್ದು, ಇಂದು ಭಟ್ಕಳ ಹಾಗೂ ಶಿರಸಿಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 28ಕ್ಕೆ ಏರಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version