ಮುರ್ಡೇಶ್ವರ ಪೊಲೀಸರಿಂದ ಮಾಹಿತಿ
ಎಚ್ಚರವಾಗಿರುವಂತೆ ಸಾರ್ವಜನಿಕರಿಗೆ ಸೂಚನೆ
ಭಟ್ಕಳ: ಸೈಬರ್ ವಂಚಕರು ಈ ಡಿಜಿಟಲ್ ಪ್ಲಾಟ್ ಫಾರ್ಮ್ ಗಳ ಮೂಲಕ ಜನರನ್ನು ವಂಚಿಸುವ ದಾರಿಗಳನ್ನು ಕಂಡುಕೊಂಡಿದ್ದು, ಮೋಸದಿಂದ ಗ್ರಾಹಕರಿಗೆ ಹಣ ದೋಚುವ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ.
ಹೌದು Phone pay App ಬಳಸುವ ಗ್ರಾಹಕರಲ್ಲಿ ಮುರುಡೇಶ್ವರ ಪೊಲೀಸ ಠಾಣೆ ಯಿಂದ ಎಚ್ಚರಿಕೆ ಮಾಹಿತಿ ನೀಡಿದ್ದು 6289474895 ಈ ಅನಾಮಧೇಯ ನಂಬರಿನಿಂದ ಕರೆ ಮಾಡಿ ನಾನು Phone pay ಗ್ರಾಹಕರ ಸೇವಾ ಕೇಂದ್ರದಿಂದ ಮಾತನಾಡುತ್ತಿರುವುದು, ನಮ್ಮ ಎಲ್ಲಾ Phone pay ಗ್ರಾಹಕರಿಗೆ covid-19 ವಿಮಾ ಕೇಂದ್ರದಿಂದ 5000 ರೂಪಾಯಿ ಸಿಗುತ್ತಿದ್ದು, ಆ ಹಣವನ್ನು ಪಡೆದುಕೊಳ್ಳಲು ನಾವು ನಿಮಗೆ To-pay ಎನ್ನುವ ಲಿಂಕನ್ನು ಕಳುಹಿಸುತ್ತೇವೆ ಎಂದು ಆ ಲಿಂಕನ್ನು ಕಳುಹಿಸಲಾಗುತ್ತದೆ. ಒಂದು ವೇಳೆ ಅವರು ಕಳುಹಿಸಿದ To-pay ಲಿಂಕನ್ನು ತೆರೆದರೆ ಕೂಡಲೇ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣ ಡ್ರಾ ಆಗುತ್ತದೆ.
ಆದ್ದರಿಂದ 6289474895 ನಂಬರಿನಿಂದ ಕರೆ ಬಂದರೆ ಸ್ವೀಕರಿಸಬಾರದೆಂದು ಮುರುಡೇಶ್ವರ ಪೊಲೀಸ್ ಠಾಣೆ, ಪಿ,ಎಸ್,ಐ.ಸಿ.ಆರ್ ಪುಟ್ಟಸ್ವಾಮಿ ಸರ‍್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ