Important
Trending

Ganesha Idol: ಎಂಜಿನೀಯರ್ ಆದರೂ ಕೆಲಸಕ್ಕೆ ರಜೆಹಾಕಿ ಗಣೇಶ ಮೂರ್ತಿ ತಯಾರಿಕೆ

ಆಸಕ್ತಿ ಕಳೆದುಕೊಳ್ಳದ ಈ ಕುಟುಂಬದ ಹೊಸ ತಲೆಮಾರು

ಭಟ್ಕಳ: ಗಣೇಶ ಮಂಡಳಿ ಅವರು ಗಣಪತಿ ಮೂರ್ತಿ (Ganesha Idol) ಪ್ರತಿಷ್ಠಾಪನೆಗೆ ಸಕಲಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಗಣೇಶ ಮೂರ್ತಿ ತಯಾರಕರ ಕೈಚಳಕದ ಕೆಲಸವು ಮುಕ್ತಾಯದ ಹಂತಕ್ಕೆ ತಲುಪಿದ್ದು ಮುರುಡೇಶ್ವರದ ದೇವಿದಾಸ ಗುಡಿಗಾರ ಸಹೋದರರು ಗಣೇಶ ಮೂರ್ತಿಗೆ ಬಣ್ಣ ಬಳಿಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಕಲೆಯನ್ನು ಕುಟುಂಬದಿoದ ಕುಟುಂಬಕ್ಕೆ ಮುನ್ನಡೆಸಿಕೊಂಡು ಹೋಗುವುದು ಎಷ್ಟು ಮುಖ್ಯವೇ ಅದೇ ರೀತಿ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಸಹ ಅಷ್ಟೇ ಮುಖ್ಯ. ತಾಲೂಕಿನ ಮುರುಡೇಶ್ವರದ ದೇವಿದಾಸ ಗುಡಿಗಾರ, ದಿನೇಶ ಗುಡಿಗಾರ ಹಾಗು ಪ್ರದೀಪ ಗುಡಿಗಾರ ಕುಟುಂಬವು ತಮ್ಮ ಅಜ್ಜ, ತಂದೆಯ,,,, ಗಣೇಶ ಮೂರ್ತಿ ತಯಾರಿಯ ಕೆಲಸವನ್ನು ಬಿಡದೇ ಅದನ್ನು ಮೊದಲಿನಷ್ಟೇ ಶ್ರದ್ದಾ ಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಸಿದ್ದಾಪುರದಿಂದ ಮೂರ್ತಿ ತಯಾರಿಕೆಗೆ ಅಗತ್ಯವಾದ ಮಣ್ಣನ್ನು ಮಣ್ಣು ಹದ ಮಾಡಿ, ಆ ಬಳಿಕ ಗಣೇಶ ಮೂರ್ತಿಯ (Ganesha Idol) ವಿವಿಧ ವಿನ್ಯಾಸ, ಎತ್ತರವನ್ನು ತಯಾರಿಸುವ ಕೆಲಸವು ಮುರುಡೇಶ್ವರ ಗುಡಿಗಾರ ಕುಟುಂಬಕ್ಕೆ ಪ್ರತಿ ವರ್ಷದ ಕಾಯಕವಾಗಿದೆ. ಈ ಗುಡಿಗಾರರ ಕುಟುಂಬವು ಗಣೇಶ ಮೂರ್ತಿಯ ತಯಾರಿಕೆಯ ಜೊತೆಗೆ ಮದುವೆ ಹಾಗೂ ಇನ್ನೀತರ ಶುಭ ಕಾರ್ಯಕ್ರಮದ ವೇದಿಕೆ – ಅಲಂಕಾರ ಸೇರಿದಂತೆ ಕಲ್ಲಿನ ಮೂರ್ತಿ ಕೆತ್ತನೆ ಕೆಲಸ ಮಾಡುತ್ತಾ ಬಂದಿದೆ. ದೇವಿದಾಸ ಗುಡಿಗಾರರು ಹಾಗೂ ಅವರ ಸಹೋದರರು 50 ವರ್ಷದಿಂದ ಕುಟುಂಬದ ಹಿರಿಯ ತಲೆಮಾರಿನವರು ನಡೆಸಿಕೊಂಡು ಬಂದ ಗಣೇಶ ಮೂರ್ತಿ ತಯಾರಿಕೆ ಮುನ್ನಡೆಸಿಕೊಂಡು ಬಂದಿದ್ದಾರೆ.

ಇವರ ಬಳಿ ತಯಾರಾಗುವ ಮಣ್ಣಿನ ಗಣಪತಿಯು 1 ಅಡಿಯಿಂದ 7 ಅಡಿಯ ತನಕ ಇರುತ್ತದೆ. ಕಳೆದ 47 ವರ್ಷದಿಂದ ಇಲ್ಲಿನ ಮುರುಡೇಶ್ವರದ ಓಲಗ ಮಂಟಪದಲ್ಲಿ ಪ್ರತಿಷ್ಠಾಪಿಸುವ 7 ಅಡಿ ಗಣಪತಿಯನ್ನು ಈ ಗುಡಿಗಾರ ಕುಟುಂಬದವರು ದೇವರ ಸೇವೆಯ ಹಿನ್ನೆಲೆ ಉಚಿತವಾಗಿ ತಯಾರಿಸಿಕೊಡುತ್ತಾ ಬಂದಿದ್ದಾರೆ.

ಈ ಗುಡಿಗಾರ ಕುಟುಂಬದ ಹೊಸ ತಲೆಮಾರಿನ ಯುವಕರು ಓರ್ವ ಇಂಜಿನಿಯರ ಉದ್ಯೋಗಿ ಗಣೇಶ ದಿನೇಶ ಗುಡಿಗಾರ ಹಾಗೂ ಬ್ಯಾಂಕ್ ಉದ್ಯೋಗಿ ನಾಗರಾಜ ಉಮೇಶ ಗುಡಿಗಾರ ಇವರು, ಹಿರಿಯರ ಕಾಯಕವನ್ನು ಬಿಡದೇ ಗಣೇಶ ಮೂರ್ತಿಯ ತಯಾರಿಕೆಯ ವೇಳೆ ಇದಕ್ಕಾಗಿಯೇ ಸಮಯ ಮೀಸಲಿಟ್ಟು ತಮ್ಮನ್ನು ತಾವು ತೊಡಿಸಿಕೊಳ್ಳುತ್ತಿರುವುದು ಕುಟುಂಬಕ್ಕೆ ಸಂತಸ ತಂದಿದೆ. ಮನೆಯಲ್ಲಿನ ಮಹಿಳೆಯರು ತಮ್ಮ ಮನೆಯ ಕೆಲಸದ ಜೊತೆಗೆ ಬಿಡುವಿನ ಸಮಯದಲ್ಲಿ ಗಣೇಶ ಮೂರ್ತಿಗೆ ಬಣ್ಣ ಬಳಿಯುವ ಕೆಲಸದಲ್ಲಿ ಸಹಾಯ ಮಾಡಲಿದ್ದು, ಕುಟುಂಬದವರೆಲ್ಲರು ಸೇರಿ ಈ ಕಾರ್ಯ ಮಾಡುತ್ತಿರುವುದು ಸಂತಸ ನೀಡಿದೆ.

ಈ ಬಗ್ಗೆ ನಮ್ಮ ವಾಹಿನಿಯೊಂದಿಗೆ ಮಾತನಾಡಿದ ಗಣೇಶ ಮೂರ್ತಿ ತಯಾರಕರಾದ ದೇವಿದಾಸ ಗುಡಿಗಾರ ಗಣಪತಿ ಮೂರ್ತಿಯ ಆರಂಭಕ್ಕೂ ಮೊದಲು ನಮ್ಮಲ್ಲಿ ಬಂದು ವಿಳ್ಯದೆಳೆಯನ್ನು ನೀಡಿ ಸಾಂಪ್ರದಾಯಿಕವಾಗಿ ಗಣಪತಿ ಮೂರ್ತಿ ತಯಾರಿಸಿಕೊಡಬೇಕೆಂದು ತಿಳಿಸಿ ಹೋಗಲಿದ್ದು, ಅದರಂತೆ ಜನರ ಇಷ್ಟದ ರೀತಿಯಲ್ಲಿ ಗಣೇಶ ಮೂರ್ತಿ ತಲೆ ತಲಾಂತರದಿoದ ತಯಾರಿಸುತ್ತಾ ಬಂದಿದ್ದೇವೆ. ಮಣ್ಣಿನ ಅಭಾವ, ದರದ ಏರಿಕೆಯ ನಡುವೆ ನಮ್ಮ ಕೆಲಸವನ್ನು ಮುನ್ನಡೆಸಿಕೊಂಡು ಬಂದಿದ್ದೇವೆ ಎಂದರು.

ಇoಜಿನಿಯರ ಆಗಿ ಉದ್ಯೋಗ ಮಾಡಿಕೊಂಡಿದ್ದ ಗಣೇಶ ದಿನೇಶ ಗುಡಿಗಾರ ಮಾತನಾಡಿ ‘ನಮ್ಮ ಅಜ್ಜ ತಂದೆ ಅವರೆಲ್ಲರು ಈ ಗಣೇಶ ಮೂರ್ತಿ ತಯಾರಿಕೆ ಕೆಲಸವನ್ನು ನಡೆಸಿಕೊಂಡು ಬಂದಿದ್ದಾರೆ. ನಾನು ಸದ್ಯ ಬೆಂಗಳೂರಿನಲ್ಲಿ ಇಂಜಿನಿಯರಿoಗ್ ಪದವಿ ಮುಗಿಸಿ ಉತ್ತಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಈ ಗಣೇಶ ಚತುರ್ಥಿ ಹಬ್ಬದ ಎರಡು ತಿಂಗಳು ಮೊದಲು ಕೆಲಸಕ್ಕೆ ರಜೆ ಹಾಕಿ ಊರಿಗೆ ಬಂದಿದ್ದೇನೆ. ಮುಂದೆ ಸಹ ಈ ಕಾರ್ಯ ನಡೆಸಿಕೊಂಡು ಹೋಗುತ್ತೇನೆ ಎಂದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button