ದಾರಿಯಂಚಿನಲ್ಲಿ ಸತ್ತು ಬಿದ್ದಿದ್ದ ಆಕಳನ್ನು ಎತ್ತಿ ಸಾಗಿಸಿದ ಸ್ವಚ್ಛತಾ ಬಂಧುಗಳು

[sliders_pack id=”3491″]

ಅಂಕೋಲಾ : ಪಟ್ಟಣದ ಕಾಲೇಜ್ ರಸ್ತೆಯಂಚಿನಲ್ಲಿ (ಮಿಶನರಿ ಆಸ್ಪತ್ರೆಯ ಎದುರು) ಸತ್ತು ಬಿದ್ದಿದ್ದ ಆಕಳೊಂದನ್ನು ತಮ್ಮ ವಾಹನದಲ್ಲಿ ಎತ್ತಿ ಸಾಗಿಸುವ ಮೂಲಕ ಪುರಸಭೆಯ ಸಿಬ್ಬಂದಿಗಳು ಸ್ಥಳೀಯರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಮಂಗಳವಾರ ರಾತ್ರಿ ವೇಳೆ ಅಥವಾ ಬುಧವಾರ ಬೆಳಗ್ಗೆ ಈ ಆಕಳು ಅಸುನೀಗಿರಬಹುದಾಗಿದ್ದು ಯಾವುದೋ ವಾಹನ ಅಪಘಾತಪಡಿಸಿರುವ ಸಾಧ್ಯತೆಯೂ ಕೇಳಿ ಬರುತ್ತಿದೆ. ಗರ್ಭ ಧರಿಸಿದಂತಿರುವ ಈ ಆಕಳು ಸತ್ತು ಬಿದ್ದಿರುವ ಸುದ್ದಿ ಅಕ್ಕ-ಪಕ್ಕದ ಗ್ರಾಮಗಳವರೆಗೂ ತಲುಪಿದ್ದರೂ ಬಹು ಹೊತ್ತಿನವರೆಗೆ ಆಕಳ ಮಾಲಕರಾರು ಬಂದಿಲ್ಲ ಎನ್ನಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಇಂತಹ ಹಲವು ಬಿಡಾಡಿ ಧನ ಜಾನುವಾರುಗಳು ಒಡಾಡಿಕೊಂಡಿರುತ್ತಿದ್ದು, ಆಕಳು ಸತ್ತು ಹೋದ ಕುರಿತು ಮಾಲಕರಿಗೆ ಸುದ್ದಿ ತಲುಪದಿರುವ ಅಥವಾ ಸತ್ತು ಹೋದ ಆಕಳನ್ನು ತಂದು ಏನು ಮಾಡುವುದು ಎಂಬ ಅಸಡ್ಡೆಯಿಂದ ಮಾಲಕರಾರು ಮುಂದೆ ಬರದಿರುವ ಸಾಧ್ಯತೆಗಳು ಇರಬಹುದೆಂದುಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು.

ದಿನಕರ ದೇಸಾಯಿ ಮಾರ್ಗದಂಚಿನ ಕಾಂಪ್ಲೆಕ್ಸ ಒಂದರಲ್ಲಿ ಅಂಗಡಿಕಾರರಾಗಿರುವ ಸತೀಶ ನಾಯ್ಕ ಹನುಮಟ್ಟಾ ಮತ್ತು ಪ್ರಕಾಶ ಮಹಾಲೆ, ರಸ್ತೆಯ ಪಕ್ಕದಲ್ಲಿ ಆಕಳು ಸತ್ತು ಬಿದ್ದಿರುವ ಸುದ್ದಿಯನ್ನು ಪೋನ್ ಮೂಲಕ ಪುರಸಭೆಯ ಮುಖ್ಯಾಧಿಕಾರಿ ಬಿ.ಪಹ್ಲಾದ್ ಮತ್ತು ಸ್ವಚ್ಛತಾ ಮೇಲ್ವಿಚಾರಕ ವಿಷ್ಣು ಗೌಡ ಅವರಿಗೆ ತಲುಪಿಸಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪುರಸಭೆ ಸ್ವಚ್ಛತಾ ಬಂಧುಗಳಾದ ರಾಜು ಕೋರಾರ್, ಜನಾರ್ಧನ ಮುರ್ಡೇಶ್ವರ,ಸುಬ್ಬು ಹರಿಜನ್, ಕೃಷ್ಣಮೂರ್ತಿ ವಡ್ಡರ್, ಅಜೇಯ ಬೈಂದೂರ್‍ಕರ್,ವಾಹನ ಚಾಲಕ ವಾಸುದೇವ ನಾಯ್ಕ ಆಕಳ ಮೃತ ದೇಹವನ್ನು ಸಾಗಿಸಿದರು. ಸತೀಶ ನಾಯ್ಕ ಮಾತಾ ಟೇಲರ್ ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version