ಕುಮಟಾ: ರಾಜ್ಯದೆಲ್ಲೆಡೆ ಭಾರಿ ಹೆಸರುವಾಸಿಯಾಗಿರುವ ಅಂಕೋಲಾದ ಮಾವಿನ ಹಣ್ಣಿನ ವ್ಯಾಪಾರ ಕುಮಟಾದಲ್ಲಿ ಜೋರಾಗಿದ್ದು, ಕುಮಟಾದ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಅಂಕೋಲಾದ ಮಹಿಳಾ ವ್ಯಾಪಾರಸ್ಥರು ಮಾವೀನ ಹಣ್ಣಿನ ವ್ಯಾಪಾರದಲ್ಲಿ ತೊಡಗಿರುವ ದೃಷ್ಯ ಸಾಮಾನ್ಯವಾಗಿದೆ. ಕುಮಟಾದ ಜನತೆ ಸೇರಿದಂತೆ ಪ್ರವಾಸಿಗರು ಸಹ ಮುಗಿಬಿದ್ದು ಮಾವುಗಳ ಖರೀದಿಸುವ ದೃಶ್ಯ ಕಂಡುಬoದಿದೆ.
ಎವರೆಸ್ಟ್ ಚಿಕನ್ ಮಸಾಲಾ ಬಳಸಬೇಡಿ: ಆಹಾರ ಸುರಕ್ಷತಾ ಅಧಿಕಾರಿ ಹೇಳಿದ್ದೇನು?
ಅಂಕೋಲಾ ತಾಲೂಕಿನ ಮಹಿಳಾ ವ್ಯಾಪಾರಸ್ಥರು ಪ್ರತಿ ವರ್ಷವೂ ಸಹ ಕುಮಟಾ ಪಟ್ಟಣದಲ್ಲಿ ಮಾವುಗಳ ವ್ಯಾಪಾರಕ್ಕೆ ಆಗಮಿಸುವಂತೆ ಈ ವರ್ಷವೂ ಕೂಡ ಪಟ್ಟಣದ ಗಿಬ್ ಸರ್ಕಲ್, ಹೊಸ ಬಸ್‌ಸ್ಟಾö್ಯಂಡ್ ಮುಂತಾದ ಬಾಗದಲ್ಲಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಈ ಬಾರಿ ಮಾವಿನ ಬೆಳೆ ಕೊಂಚ ಕಡಿಮೆಯಾಗಿದ್ದು, ಅದೇ ರೀತಿ ಬೆಲೆ ಗಗನಕ್ಕೆರಿದೆ ಎನ್ನಬಹುದಾಗಿದೆ. ಅಂಕೋಲಾದ ಕರಿ ಈಶಾಡು, ಮಲ್ಲಿಕಾ, ಆಪೂಸ್, ಪೈರಿ, ನೀಲಮ್, ತೋತಾಪುರಿ ಮುಂತಾದವುಗಳ ಬೆಲೆ ದುಪ್ಪಟ್ಟಾಗಿದೆ.
ರಾಜ್ಯಾದ್ಯಂತ ಭಾರಿ ಬೇಡಿಕೆಯಿರುವ ಅಂಕೋಲಾದ ಕರಿ ಈಶಾಡನ್ನು ಡಜನ್ ಗೆ 500 ರೂ ದಿಂದ 1 ಸಾವಿರದವರೆಗೂ ಮಾರಾಟಮಾಡಲಾಗುತ್ತಿದೆ. ಅದೇ ರೀತಿ ಮಲ್ಲಿಕ್ಕಾ ಹಣ್ಣನ್ನು ಡಜನ್‌ಗೆ 350 ರಿಂದ 400, ಆಪೂಸ್ 400, ಪೈರಿ 350 ರಿಂದ 400 ರಂತೆ ಮಾರಾಟಮಾಡಲಾಗುತ್ತಿದೆ. ಬೆಲೆ ಎಷ್ಟೆ ದುಬಾರಿಯಾದರೂ ಸಹ ಹಣ್ಣುಗಳ ರಾಜ ಮಾವಿನ ಹಣ್ಣಿಗೆ ಬೇಡಿಕೆ ಬಾರೀ ಇದ್ದು ಅದೇ ರೀತಿ ಕುಮಾಟದಲ್ಲಿಯೂ ಕೂಡ ಮಾವಿನ ಹಣ್ಣಿನ ವ್ಯಾಪಾರ ಜೋರಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ