Join Our

WhatsApp Group
Info
Trending

ಹೊಟೇಲ್ ನಾರಾಯಣ ನಾಯಕ ವಿಧಿವಶ

ಅಂಕೋಲಾದ ಅಲಗೇರಿ ಗ್ರಾ.ಪಂ ಮಾಜಿ ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ ಮಾಜಿ ಅಧ್ಯಕ್ಷ, ಧರ್ಮದರ್ಶಿ, ಅರ್ಬನ್ ಬ್ಯಾಂಕ್ ನಿರ್ದೇಶಕರಾಗಿ ಕಾರ್ಯನಿರ್ವಹಣೆ

ಅಂಕೋಲಾ : ಬಹುವರ್ಷಗಳ ಹಿಂದೆಯೇ ತಾಲೂಕಿನಲ್ಲಿ ಹೊಟೇಲ್ ಉಧ್ಯಮ ಆರಂಭಿಸಿ, ಹಂತ ಹಂತವಾಗಿ ಮೇಲೆರುತ್ತಾ ಬಂದು ಇಂದಿನವರೆಗೆ ಆ ಉಧ್ಯಮವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದು, ಹಲವು ಆತ್ಮೀಯರಿಂದ ‘ಹೊಟೇಲ್ ನಾರಾಯಣ ನಾಯಕ’ ಎಂದೇ ಕರೆಯಿಸಿಕೊಳ್ಳುತ್ತಿದ್ದ ನಾರಾಯಣ ಬಿ. ನಾಯಕ ಅಲಗೇರಿ ಬುಧವಾರ ರಾತ್ರಿ ವಿಧಿವಶರಾದರು. ಕಳದೆರಡು ದಿನಗಳ ಹಿಂದೆ ಮನೆಯಲ್ಲಿರುವಾಗಲೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಕುಸಿದು ಬಿದ್ದಿದ್ದರು ಎಂದು ಹೇಳಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಗೆ ಸ್ಪಂಧಿಸದೇ ಅಲ್ಲಿಯೇ ಕೊನೆಯುಸಿರೆಳೆದರು.
ಅಲಗೇರಿ ಗ್ರಾ.ಪಂ ಅಧ್ಯಕ್ಷರಾಗಿ, ತಾಲೂಕಾ ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಮೃತರು, ವೆಂಕಟ್ರಮಣ ದೇವಸ್ಥಾನದ ಧರ್ಮದರ್ಶಿಯಾಗಿ, ಪ್ರಸ್ತುತ ಅಂಕೋಲಾ ಅರ್ಬನ್ ಬ್ಯಾಂಕ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಹತ್ತಾರು ವಿಧಾಯಕ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಈ ಅಜಾನು ಬಾಹು, ತನ್ನ ನೇರ ನಡೆ-ನುಡಿಗಳಿಂದ ಹೆಸರಾಗಿದ್ದಲ್ಲದೇ, ಹಾಸ್ಯ ಪ್ರವೃತ್ತಿ ಮೂಲಕವು ತನ್ನ ಆತ್ಮೀಯರ ಮನ ಗೆದ್ದಿದ್ದರು.
ಮೃತರು ಪತ್ನಿ ಪಾರ್ವತಿ, ಮಗ ಗುರು, ಮೂವರು ಹೆಣ್ಣು ಮಕ್ಕಳು, ಸಹೋದರ-ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ ತೊರೆದಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Check Also
Close
Back to top button