Uttara Kannada
Trending

ಉತ್ತರ ಕನ್ನಡದಲ್ಲಿಂದು 119 ಕರೊನಾ ಕೇಸ್

130 ಮಂದಿ ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,188ಕ್ಕೆ ಏರಿಕೆ

[sliders_pack id=”3491″]

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿಂದು 119 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರದಲ್ಲಿ 8, ಅಂಕೋಲಾ 6, ಕುಮಟಾ 21, ಹೊನ್ನಾವರ 10, ಭಟ್ಕಳ 9, ಶಿರಸಿಯಲ್ಲಿ 5, ಸಿದ್ದಾಪುರ 11, ಯಲ್ಲಾಪುರ 17, ಮುಂಡಗೋಡ 9, ಹಳಿಯಾಳ 13, ಜೋಯ್ಡಾದಲ್ಲಿ 10 ಕೇಸ್ ದೃಢಪಟ್ಟಿದೆ. ಇದೇ ವೇಳೆ ಇಂದು 130 ಮಂದಿ ಗುಣಮುಖರಾಗಿ ಬಿಡುಗಡೆ ಬಿಡಿಗಡೆಯಾಗಿದ್ದಾರೆ. ಕಾರವಾರ 10, ಅಂಕೋಲಾ 12, ಕುಮಟಾ 25, ಹೊನ್ನಾವರ 17, ಭಟ್ಕಳ 8, ಶಿರಸಿ 14, ಸಿದ್ದಾಪುರ 5, ಯಲ್ಲಾಪುರ 11, ಮುಂಡಗೋಡ 4, ಹಳಿಯಾಳ 18, ಹಾಗು ಜೋಯ್ಡಾದಲ್ಲಿ 6 ಮಂದಿ ಬಿಡುಗಡೆಯಾಗಿದ್ದಾರೆ.

ಇಂದು 119 ಕೇಸ್ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5188ಕ್ಕೆ ಏರಿಕೆಯಾಗಿದೆ. 541 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ©Copyright reserved by Vismaya tv

ಅಂಕೋಲಾ ತಾಲೂಕಿನಲ್ಲಿಂದು 4 ಕರೊನಾ ಕೇಸ್ : ಗುಣಮುಖ 3

ಅಂಕೋಲಾ : ತಾಲೂಕಿನ ಶಿರಕುಳಿಯಲ್ಲಿ2, ಹಿಲ್ಲೂರಿನಲ್ಲಿ 1 ಮತ್ತು ಪಟ್ಟಣ ವ್ಯಾಪ್ತಿಯಲ್ಲಿ 1 ಕರೊನಾ ಕೇಸುಗಳು ಪತ್ತೆಯಾಗಿದ್ದು ಬುಧವಾರ ಒಟ್ಟೂ 4ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 3ಪ್ರಕರಣಗಳು ಈ ಹಿಂದಿನ ಸೋಂಕಿತರ ಸಂಪರ್ಕದಿoದ ಬಂದಿರುವ ಸಾಧ್ಯತೆ ಇದ್ದು, ಇನ್ನೊಂದು ಪ್ರಕರಣವು ಐ.ಎಲ್.ಐ ಮಾದರಿ ಲಕ್ಷಣಗಳಿಂದ ಕೂಡಿದೆ ಎನ್ನಲಾಗಿದೆ. ಇಂದು 89ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. ಸೋಂಕು ಮುಕ್ತರಾದ 3ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಹೋಮ್ ಐಸೋಲೇಶನ್ ನಲ್ಲಿರುವ 7ಜನರು ಸೇರಿದಂತೆ ಒಟ್ಟೂ 47ಪ್ರಕರಣಗಳು ಸಕ್ರಿಯವಾಗಿವೆ.

ವೈದ್ಯೆಯಲ್ಲಿಯೂ ಲಘು ಸೋಂಕು : ತಾಲೂಕಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯೆಯೋರ್ವಳಲ್ಲಿಯೂ ಕಳೆದೆರಡು ದಿನಗಳ ಹಿಂದೆ ಸೋಂಕಿನ ಲಘು ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಕೆಲ ಕಾಲ ಸ್ಥಳೀಯರಲ್ಲಿ ಆತಂಕ ಏರ್ಪಟ್ಟಿತ್ತು. ಆಸ್ಪತ್ರೆ ಸಿಬಂಧಿಗಳು ಸೇರಿ ಹಲವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು ನೆಗೆಟಿವ್ ವರದಿಗಳಿಂದಾಗಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕರೊನಾ ವಾರಿಯರ್ಸಗಳಾದ ವೈದ್ಯರು, ನರ್ಸ್ಗಳು, ಆರೋಗ್ಯ ಸಿಬ್ಬಂಧಿಗಳು ತಮಗೆ ಸೋಂಕು ತಗುಲುವ ಅಪಾಯವಿದ್ದೂ, ಜನತೆಯ ಆರೋಗ್ಯ ಕಾಳಜಿಯಿಂದ ಸೇವೆ ನೀಡಲು ಮುಂದಾಗುತ್ತಿರುವುದನ್ನು ಪ್ರಶಂಸಿಸಲೇಬೇಕಾಗಿದೆ.

ಬೇಲೇಕೇರಿ : ಈ ಹಿಂದೆ ಸ್ಥಳೀಯ ಒಂದೆರಡು ಕೋವಿಡ್ ಕೇಸ್‌ಗಳ ಹಿಂದೆ ಮಂಗಳುರಿನ ಆಸ್ಪತ್ರೆಯ ನಂಟು ಕೇಳಿ ಬಂದಿತ್ತು. ಕಳೆದೆರಡು ದಿನಗಳ ಹಿಂದೆ ಮತ್ತೆ 3ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಈ ಕೇಸ್‌ಗಳಿಗೆ ಹೊರ ರಾಜ್ಯದ ನಂಟಿದೆ ಎನ್ನಲಾಗಿದೆ ಸ್ಥಳೀಯ ಬೋಟ್ ಮಾಲಕರ ಬಳಿ ಮೀನುಗಾರಿಕೆ ಕೆಲಸಕ್ಕೆ ಬಂದಿಳಿದ ಓರಿಸ್ಸಾ ಮೂಲದ ಕೆಲವರನ್ನು ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಅವರಲ್ಲಿ ಮೂವರಿಗೆ ಪಾಸಿಟಿವ್ ಲಕ್ಷಣಗಳು ದೃಢಪಟ್ಟಿತ್ತು. ಹೊರ ರಾಜ್ಯದಿಂದ ಬಂದ ಕೆಲವರಲ್ಲಿ ಕಾಣಿಸಿಕೊಂಡ ಈ ನಂಜಿನ ಮಾರಿ, ಸ್ಥಳೀಯ ಕೆಲ ಮೀನುಗಾರರ ಆತಂಕಕ್ಕೆ ಕಾರಣವಾಗಿ ನೆಮ್ಮದಿ ಕೆಡಿಸಿತ್ತು ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಚಿಂತಿಸುವ ಅವಶ್ಯಕತೆ ಇಲ್ಲ, ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ

ಶ್ರೀ ಕೇರಳ, ಕರಾವಳಿ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು.
ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ:-8884997762
( ಜಾಹೀರಾತು )

Back to top button