Info
Trending

ತಾಲೂಕಾ ಆರೋಗ್ಯಾಧಿಕಾರಿ ಗಳಾಗಿ ಅಧಿಕಾರ ವಹಿಸಿಕೊಂಡ ಡಾ. ಸವಿತಾ ಕಾಮತ

ಭಟ್ಕಳ : ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿರುವ ಡಾ. ಸವಿತಾ ಕಾಮತ ಅವರನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಾ ಆರೋಗ್ಯಾಧಿಕಾರಿಗಳಾಗಿ ನೇಮಿಸಿ ಭಟ್ಕಳ ಉಪವಿಭಾಗಾಧಿಕಾರಿ ಭರತ್ ಎಸ್ ಆದೇಶ ನೀಡಿದ್ದಾರೆ.

ಭಟ್ಕಳ ತಾಲೂಕಿನಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕಿತ ವ್ಯಕ್ತಿಗಳ ಸಂಪರ್ಕ, ಪತ್ತೆ ಹಚ್ಚುವಿಕೆ ಮುಂತಾದ ಕಾರ್ಯಗಳಲ್ಲಿ ಪ್ರಗತಿ ಕುಂಠಿತವಾಗಿದೆ. ಹೀಗೆ ಆದಲ್ಲಿ ಭಟ್ಕಳದಲ್ಲಿ ಕೋವಿಡ್ ನಿಯಂತ್ರಣ ಕಷ್ಟ ಸಾದ್ಯ ಎಂದು ಜಿಲ್ಲಾಧಿಕಾರಿ ಡಾ ಹರೀಶ ಕುಮಾರ ಕೆ. ನಡೆಸಿದ ವಿಡಿಯೋ ಸಂದರ್ಶನದಲ್ಲಿ ಸೂಚನೆ ನೀಡಿದ್ದರು. ಜಿಲಾಧಿಕಾರಿಗಳ ನಿರ್ದೇಶನದಂತೆ ಡಾ. ಸವಿತಾ ಕಾಮತ ಅವರನ್ನು ಸೆ.5ರಿಂದ ಜಾರಿಗೆ ಬರುವಂತೆ ತಾಲೂಕಾ ಆರೋಗ್ಯಾಧಿಕಾರಿಗಳಾಗಿ ನೇಮಿಸಲು ಆದೇಶಿಸಿದ್ದರು.

ಈ ಹಿನ್ನಲೆಯಲ್ಲಿ ತಾಲೂಕಾ ವೈದ್ಯಾಧಿಕಾರಿಯಾಗಿರುವ ಡಾ. ಮೂರ್ತಿರಾಜ ಅವರನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸಿ ಮುಂದಿನ ಆದೇಶ ಬರುವ ವರೆಗೆ ಡಾ. ಸವಿತಾ ಕಾಮತ ಅವರನ್ನು ತಾಲೂಕಾ ಆರೋಗ್ಯಾಧಿಕಾರಿಗಳಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

ಇದನ್ನೂ ಓದಿ:ಇಂದಿನ ಪ್ರಮುಖ‌‌ ಸುದ್ದಿಗಳು

Related Articles

Back to top button