ಪುರಾಣ ಪ್ರಸಿದ್ಧ ಕರಿಕಾನಪರಮೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಸಂಭ್ರಮ : ದೇವಸ್ಥಾನಕ್ಕೆ ಹರಿದುಬಂದ ಭಕ್ತ ಸಾಗರ

ಐತಿಹಾಸಿಕ ದೇಗುಲಗಳಲ್ಲೊಂದಾದ ಹೊನ್ನಾವರದ ಶ್ರೀ ಕರಿಕಾನಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದ್ದು, ಭಕ್ತರು ವಿವಿಧ ಸೇವೆಗಳನ್ನ ಸಲ್ಲಿಸಿ ಕೃತಾರ್ತರಾಗುತ್ತಿದ್ದಾರೆ. ಪುರಾತನ ದೇಗುಲಗಳಲ್ಲೊಂದಾದ ತಾಲೂಕಿನ ಶಕ್ತಿ ಸ್ಥಳವೆಂದೇ ಪ್ರಖ್ಯಾತಿಯಾದ ಶಕ್ತಿಪೀಠಗಳಲ್ಲೊಂದಾದ ಶ್ರೀ ಕ್ಷೇತ್ರವಾದ ಕರಿಕಾನ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಕ್ತರ ದಂಡೆ ಹರಿದುಬರುತ್ತಿದೆ.

ಕೆಲಸಕ್ಕೆ ಹೋದ ಯುವತಿ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಹೊನ್ನಾವರ ತಾಲೂಕಿನಿಂದ ಸುಮಾರು 11 ಕಿ.ಮೀ ದೂರದಲ್ಲಿರುವ ಕಾಡಿನ ಮಧ್ಯೆ ಹಾಗೂ ತಾಲೂಕಿನಲ್ಲಿಯೇ ಎತ್ತರದ ಸ್ಥಳದಲ್ಲಿ ನೆಲೆಸಿದ್ದಾಳೆ. ಈ ತಾಯಿಗೆ ಅರಿಶಿಣ ಕೊಂಬಿನ ನೈವೈದ್ಯ ತುಂಬಾ ಮಹತ್ವವಾಗಿದೆ. ದೇವಿಯ ಮುಖವನ್ನು ಅರಿಶಿಣ ಲೇಪನದಿಂದ ಅಲಂಕಾರಿಸುತ್ತಾರೆ. ದೇವಸ್ಥಾನದಲ್ಲಿ ಅರಿಶಿಣ ಪ್ರಸಾದ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಭಕ್ತರು ದೇವಿಗೆ ಅರಿಶಿನ ಕೊಂಬಿನ ಹರಕೆ ಸಲ್ಲಿಸಿದರೆ ಅವರ ಕೆಲಸ ಕಾರ್ಯಗಳು ಸಿದ್ಧಿಯಾಗುತ್ತವೆ ಎನ್ನುವ ನಂಬಿಕೆ ಇದ್ದು ಸಾವಿರಾರು ಭಕ್ತರು ಶ್ರೀದೇವಿಗೆ ಅರಿಶಿನ ಕೊಂಬಿನ ಸೇವೆಯನ್ನು ಸಲ್ಲಿಸುತ್ತಾರೆ.

ಇನ್ನೂ ಇಲ್ಲಿಯ ಪುರೋಹಿತರಾದ ಸುಬ್ರಹ್ಮಣ್ಯ ಭಟ್ ಮಾತನಾಡಿ ಈ ದೇವಸ್ಥಾನವು ಪುರಾತನ ಕಾಲದ ದೇವಸ್ಥಾನವಾಗಿದೆ ಈ ಹಿಂದೆ ಬಸವನದುರ್ಗಾದಿಂದ ಇಲ್ಲಿ ಬಂದು ತಾಯಿ ನೆನೆಸಿದ್ದಾಳೆ. ಈ ಹಿಂದೆ ಆಕಳು ಯಜಮಾನರ ಮನೆಯಲ್ಲಿ ಹಾಲು ನೀಡದೇ ಈ ಕ್ಷೇತ್ರದಲ್ಲಿ ಬಂದು ಹಾಲನ್ನು ನೀಡುತ್ತಿರುವುದು ಗಮನಕ್ಕೆ ಬಂದು ವಿಚಾರಿಸಿದಾಗ ಶ್ರೀದೇವಿಯ ಮಹಾತ್ಮೆ ತಿಳಿದು ತದನಂತರ ಇಲ್ಲಿ ಶ್ರೀದೇವಿಗೆ ಪೂಜೆಗಳು ನಡೆಯಲು ಪ್ರಾರಂಭವಾಯಿತು ಹೀಗೆ ತಾಯಿ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ಥಿದ್ದಾಳೆ ಎಂದು ಹೇಳಿದರು.

ಇನ್ನೂ ದೇವಸ್ಥಾನದಲ್ಲಿ ನವರಾತ್ರಿಯಲ್ಲಿ ವೇದಪಾರಾಯಣ, ಚಂಡಿಕಾ ಹೋಮ, ತ್ರಿಕಾಲ ಪೂಜೆಗಳು, ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಭಕ್ತರು ಬೇರೆ ಬೇರೆ ಊರಿನಿಂದ ಬಂದು ತಮ್ಮ ತಮ್ಮ ಸೇವೆಗಳನ್ನ ಸಲ್ಲಿಸಿ ಪುನೀತರಾಗುತ್ತಿದ್ದಾರೆ.

Exit mobile version