- 35 ಮಂದಿ ಗುಣಮುಖರಾಗಿ ಬಿಡುಗಡೆ
- ಜಿಲ್ಲೆಯಲ್ಲಿಂದು ಇಬ್ಬರ ಸಾವು
- ಹೊನ್ನಾವರದಲ್ಲಿ ಇಂದು 18 ಕೇಸ್ ದಾಖಲು
- ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಕೇಸ್ ದಾಖಲಾಗಿದೆ ನೋಡಿ?
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 134 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರ 13, ಅಂಕೋಲಾ 8, ಹೊನ್ನಾವರ 1, ಭಟ್ಕಳ 5, ಶಿರಸಿ 12, ಸಿದ್ದಾಪುರ 27, ಯಲ್ಲಾಪುರ 37, ಹಳಿಯಾಳ 21, ಜೋಯ್ಡಾ 10 ದಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ 35 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿಂದು ಇಬ್ಬರ ಸಾವು:
ಕಾರವಾರ 1, ಅಂಕೋಲಾ 5, ಹೊನ್ನಾವರ 11, ಶಿರಸಿ 6, ಹಳಿಯಾಳ 9, ಜೋಯ್ಡಾದಲ್ಲಿ ಮೂವರು ಇಂದು ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇಂದು 134 ಕೇಸ್ ದೃಢಪಟ್ಟ ಬೆನ್ನಲ್ಲೆ ಸೋಂಕಿತರ ಸಂಖ್ಯೆ 6,938ಕ್ಕೆ ಏರಿಕೆಯಾಗಿದೆ. 1,103 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಹಳಿಯಾಳದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಮೃತರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ ಇಂದು 18 ಕೇಸ್ ದಾಖಲು:
ಹೊನ್ನಾವರ: ತಾಲೂಕಿನಲ್ಲಿ ಇಂದು 18 ಜನರಲ್ಲಿ ಕರೋನಾ ಪಾಸಿಟಿವ್ ದೃಢ ಪಟ್ಟಿದೆ. ಹೊನ್ನಾವರ ಪಟ್ಟಣದಲ್ಲಿ 9 ಮತ್ತು ಗ್ರಾಮೀಣ ಭಾಗದಲ್ಲಿ 9 ಕೇಸ್ ದಾಖಲಾಗಿದೆ. ಪಟ್ಟಣದ ರಥಬೀದಿಯಲ್ಲಿಯೇ 8 ಪ್ರಕರಣ ಕಾಣಿಸಿಕೊಂಡಿದ್ದು, ಕಾಸರಕೋಡ-3 ಕವಲಕ್ಕಿಯಲ್ಲಿ-3 ಮಂಕಿ- ಮುಗ್ವಾ- ಹೊಸಾಕುಳಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ಹೊನ್ನಾವರ ಪಟ್ಟಣದ 59 ವರ್ಷದ ಮಹಿಳೆ, 27 ವರ್ಷದ ಯುವತಿ, 53 ಮಹಿಳೆ, 21 ವರ್ಷದ ಯುವತಿ, 46 ವರ್ಷದ ಮಹಿಳೆ., 72 ವರ್ಷದ ಮಹಿಳೆ, 58 ವರ್ಷದ ಪುರುಷ, 16 ದಿನದ ಮಗು, ಪಟ್ಟಣದ 19 ವರ್ಷದ ಯುವಕ, ಗ್ರಾಮೀಣ ಭಾಗವಾದ ಕಾಸರಕೋಡಿನ 60 ವರ್ಷದ ಪುರುಷ, ಮಲಬಾರಕೇರಿಯ 20 ವರ್ಷದ ಯುವಕ, 25 ವರ್ಷದ ಯುವತಿಗೆ ಪಾಸಿಟಿವ್ ಬಂದಿದೆ.
ಮoಕಿಯ 80 ವರ್ಷದ ಮಹಿಳೆ, ಹೊಸಾಕುಳಿಯ 45 ವರ್ಷದ ಮಹಿಳೆ, ಮುಗ್ವಾದ 66 ವರ್ಷದ ಪುರುಷ, ಕವಲಕ್ಕಿಯ 59 ವರ್ಷದ ಪುರುಷ, 28 ವರ್ಷದ ಯುವಕ, 49 ವರ್ಷದ ಮಹಿಳೆ ಸೇರಿದಂತೆ ಒಟ್ಟು 18 ಜನರಲ್ಲಿ ಸೋಂಕು ಪತ್ತೆಯಾಗಿದೆ. ತಾಲೂಕಾ ಆಸ್ಪತ್ರೆಯಲ್ಲಿ 20 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, 178 ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ಬೇಕಾಗಿದ್ದಾರೆ
ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568