
20 ಮಂದಿ ಬಿಡುಗಡೆ : 83 ಸಕ್ರಿಯ ಪ್ರಕರಣ
ಬೆಳಸೆ, ವಾಸರೆ, ಕೊಡ್ಲಗದ್ದೆ, ಬಾಸಗೋಡ, ಅಜ್ಜಿಕಟ್ಟಾ, ಅಂಬಾರಕೋಡ್ಲ, ಹಟ್ಟಿಕೇರಿಯಲ್ಲಿ ಕಾಣಿಸಿಕೊಂಡ ಸೋಂಕು
ಅಂಕೋಲಾ : ತಾಲೂಕಿನ ಬೆಳಸೆ, ವಾಸರೆ, ಕೊಡ್ಲಗದ್ದೆ, ಬಾಸಗೋಡ, ಅಜ್ಜಿಕಟ್ಟಾ, ಅಂಬಾರಕೊಡ್ಲ, ಹಟ್ಟಿಕೇರಿ ಸೇರಿದಂತೆ ವಿವಿಧ ಭಾಗಗಳಿಂದ ಭಾನುವಾರ ಒಟ್ಟು 14 ಕೋವಿಡ್ ಕೇಸ್‍ಗಳು ದಾಖಲಾಗಿವೆ.
ಇವುಗಳಲ್ಲಿ 3 ಪ್ರಕರಣಗಳು ಜ್ವರ ಲಕ್ಷಣಗಳಿಂದ ಕೂಡಿರುವ ಐಎಲ್‍ಐ ಮಾದರಿ ಪಾಸಿಟಿವ್ ಆಗಿದ್ದು, ಉಳಿದ 11 ಪ್ರಕರಣಗಳು ಸೋಂಕಿತರ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದೆ.
ಸೋಂಕು ಮಕ್ತರಾದ 20 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 61 ಜನರ ಸಹಿತ ಒಟ್ಟೂ 83 ಪ್ರಕರಣಗಳು ಸಕ್ರಿಯವಾಗಿದೆ. ಇಂದು 45 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಸಾನ್ವಿ ಸ್ಕಿನ್ ಮತ್ತು ಲೇಸರ್ ಸೆಂಟರ್ ನಲ್ಲಿ ಉಚಿತ ಪಿಸಿಯೋಥೆರಪಿ ಶಿಬಿರ
- ಮೇ 21ರ ವರೆಗೆ ರೆಡ್ ಅಲರ್ಟ್ ಘೋಷಣೆ: ಭಾರೀ ಮಳೆಯ ಮುನ್ನೆಚ್ಚರಿಕೆ
- ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ: ವಸತಿ ಸೌಲಭ್ಯ, ಆಕರ್ಷಕ ಸಂಬಳ
- ನಾಟಿ ವೈದ್ಯ ಬೆಳಂಬಾರದ ಹನುಮಂತಗೌಡರ ಮನೆಯಲ್ಲಿ ಹತ್ತು ಸಾವಿರ ಧನ್ವಂತರಿ ಜಪ, ಹೋಮಹವನ: ಸಮಸ್ತ ಜನರ ಆರೋಗ್ಯ ಸೌಭಾಗ್ಯಕ್ಕೆ ಪ್ರಾರ್ಥನೆ
- ಉಗ್ರರ ದಾಳಿ ಬಳಿಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುತ್ತಿರುವ ವ್ಯಾಪಾರಿಗಳು, ರೈತರು: ವೀಳ್ಯದೆಲೆ ರಪ್ತು ಮಾಡುವುದಿಲ್ಲ ಎಂದ ಬೆಳೆಗಾರರು