ಕುಮಟಾದಲ್ಲಿ ಹೆಚ್ಚುತ್ತಿದೆ ಕರೊನಾ: ಇಂದು 47 ಕೇಸ್

ಗ್ರಾಮೀಣ ಭಾಗದಲ್ಲೇ ಮಿತಿಮೀರುತ್ತಿದೆ ಸೋಂಕಿನ ಹಾವಳಿ
ಎಲ್ಲಕಡೆ ಒಕ್ಕರಿಸುತ್ತಿದೆ ಮಹಾಮಾರಿಯ ನಂಜು

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಕರೊನಾ ಅಬ್ಬರ ದಿನೇ ದಿನೇ ಹೆಚ್ಚುತ್ತಿದೆ. ತಾಲೂಕಿನಾದ್ಯಂತ ಇಂದು ಬರೋಬ್ಬರಿ 47 ಕರೋನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ದಿವಗಿಯಲ್ಲಿ 4, ಹೆಗಡೆ 4, ಖಂಡಗಾರ್ 3, ಬಗ್ಗೋಣ 2, ಮಾಸೂರ್ ಕ್ರಾಸ್ 2 ಸೇರಿದಂತೆ, ಹಿರೇಗುತ್ತಿ, ಕೊಪ್ಪಳಕರವಾಡಿ, ಮೂರೂರ್, ಹನೇಹಳ್ಳಿ, ಅಳ್ವೇಕೋಡಿ, ಮಿರ್ಜಾನ್, ಕೂಜಳ್ಳಿ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ದಾಖಲಾಗಿದೆ.

ಮಾಸೂರಿನ 59 ವರ್ಷದ ಮಹಿಳೆ, ಕಲ್ಲಬ್ಬೆಯ 52 ವರ್ಷದ ಮಹಿಳೆ, ತಾರೆಮಕ್ಕಿಯ 26 ವರ್ಷದ ಯುವಕ, ಬಂಗ್ಲೆಗುಡ್ಡದ 41 ವರ್ಷದ ಮಹಿಳೆ, ದಿವಗಿಯ 39 ವರ್ಷದ ಪುರುಷ, 54 ವರ್ಷದ ಮಹಿಳೆ, 34 ವರ್ಷದ ಪುರುಷ, 33 ವರ್ಷದ ಮಹಿಳೆಗೆ ಸೋಂಕು ದಢಪಟ್ಟಿದೆ.©Copyright reserved by Vismaya tv

ಹಂದಿಗೋಣದ 70 ವರ್ಷದ ವೃದ್ಧ, ಕುಮಟಾದ 53 ವರ್ಷದ ಪುರುಷ, 41 ವರ್ಷದ ಪುರುಷ, 71 ವರ್ಷದ ವೃದ್ಧ, 65 ವರ್ಷದ ಮಹಿಳೆ, 17 ವರ್ಷದ ಯುವಕ, 47 ವರ್ಷದ ಮಹಿಳೆ, 33 ವರ್ಷದ ಮಹಿಳೆ, 3 ವರ್ಷದ ಮಗು, 7 ವರ್ಷದ ಬಾಲಕ, 43 ವರ್ಷದ ಪುರುಷ, 40 ವರ್ಷದ ಪುರುಷ, 35 ವರ್ಷದ ಮಹಿಳೆ, 58 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.

ಮಾಸೂರ್ ಕ್ರಾಸ್ 49 ವರ್ಷದ ಮಹಿಳೆ, 30 ವರ್ಷದ ಪುರುಷ, ಮಿರ್ಜಾನ್‌ನ 36 ವರ್ಷದ ಪುರುಷ, ಖಂಡಗಾರ್‌ನ 32 ವರ್ಷದ ಪುರುಷ, 32 ವರ್ಷದ ಮಹಿಳೆ, 2 ವರ್ಷದ ಮಗು, ಹಿರೇಗುತ್ತಿಯ 55 ವರ್ಷದ ಮಹಿಳೆ, ಗುಡೆಅಂಗಡಿಯ 11 ವರ್ಷದ ಬಾಲಕ, 45 ವರ್ಷದ ಪುರುಷ, ಕಲ್ಕೇರಿಯ 65 ವರ್ಷದ ಪುರುಷ, 60 ವರ್ಷದ ಮಹಿಳೆ, ಕಲಬಾಗ್‌ನ 33 ವರ್ಷದ ಪುರುಷ, ಗಾಂಧಿನಗರದ 47 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.©Copyright reserved by Vismaya tv

ಬಗ್ಗೋಣದ 52 ವರ್ಷದ ಮಹಿಳೆ, 32 ವರ್ಷದ ಮಹಿಳೆ, ಅಳ್ವೇಕೊಡಿಯ 64 ವರ್ಷದ ಮಹಿಳೆ, ಹನೇಹಳ್ಳಿಯ 36 ವರ್ಷದ ಮಹಿಳೆ, ಮೂರೂರಿನ 27 ವರ್ಷದ ಯುವತಿ, ಹೆಗಡೆಯ 53 ವರ್ಷದ ಪುರುಷ, 57 ವರ್ಷದ ಪುರುಷ, 53 ವರ್ಷದ ಮಹಿಳೆ, 58 ವರ್ಷದ ಪುರುಷ, ಕೊಪ್ಪಳಕರವಾಡಿಯ 50 ವರ್ಷದ ಮಹಿಳೆ, 58 ವರ್ಷದ ಪುರುಷ, ಕೂಜಳ್ಳಿಯ 39 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

ಇಂದು 47 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1139 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Exit mobile version