ಕುಮಟಾ ತಾಲೂಕಿನಲ್ಲಿ ಕರೊನಾ ಆರ್ಭಟ: 46 ಕೇಸ್ ದಾಖಲು

ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಸೋಂಕು
ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,449 ಕ್ಕೆ ಏರಿಕೆ

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದ್ದು, ಇಂದು ಕೂಡ ಬರೊಬ್ಬರಿ 46 ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಮೂರೂರು, ಮಾಸೂರು, ಬಂಕಿಕೊಡ್ಲ, ಮಿರ್ಜಾನ, ಬಗ್ಗೋಣ, ಹೆರವಟ್ಟಾ, ದೀವಗಿ, ತಾರಮಕ್ಕಿ, ಮೂಡಂಗಿ, ಹೆಗಡೆ, ಅಘನಾಶಿನಿ, ಬರ್ಗಿ, ಬಾಡಾ, ಗುಡೆಅಂಗಡಿ ಸೇರಿದಂತೆ ಪಟ್ಟಣ ವ್ಯಾಪ್ತಿಯಲ್ಲಿಯೂ ಸಹ ಕೊರೋನಾ ಕಾಣಿಸಿಕೊಂಡಿದೆ.

ಮೂರೂರಿನ 53 ವರ್ಷದ ಪುರುಷ, 22 ವರ್ಷದ ಪುರುಷ, ಹೆರವಟ್ಟಾದ 70 ವರ್ಷದ ವೃದ್ದೆ, 19 ವರ್ಷದ ಯುವಕ, 24 ವರ್ಷದ ಪುರುಷ, 43 ವರ್ಷದ ಮಹಿಳೆ, ಮಾಸೂರಿನ 32 ವರ್ಷದ ಮಹಿಳೆ, ಬಂಕಿಕೊಡ್ಲದ 30 ವರ್ಷದ ಪುರುಷ, 45 ವರ್ಷದ ಪುರುಷ, 37 ವರ್ಷದ ಮಹಿಳೆ, 40 ವರ್ಷದ ಮಹಿಳೆ, 18 ವರ್ಷದ ಯುವಕ, ಮಿರ್ಜಾನಿನ 70 ವರ್ಷದ ವೃದ್ದೆ, 40 ವರ್ಷದ ಮಹಿಳೆ, ವಿವೇಕನಗರದ 60 ವರ್ಷದ ವೃದ್ಧ, ಬಲ್ಲಾಳಮಕ್ಕಿಯ 21 ವರ್ಷದ ಯುವಕ, 19 ವರ್ಷದ ಯುವಕಗೆ ಸೋಂಕು ದೃಢಪಟ್ಟಿದೆ.

ಕತಗಾಲ್‌ನ 52 ವರ್ಷದ ಪುರುಷ, ಹಳೆ ಮೀನುಮಾರುಕಟ್ಟೆಯ 45 ವರ್ಷದ ಪುರುಷ, ಕುಮಟಾದ 20 ವರ್ಷದ ಪುರುಷ, 21 ವರ್ಷದ ಯುವತಿ, 38 ವರ್ಷದ ಮಹಿಳೆ, 5 ವರ್ಷದ ಬಾಲಕಿ, 39 ವರ್ಷದ ಪುರುಷ, 41 ವರ್ಷದ ಮಹಿಳೆ, 16 ವರ್ಷದ ಯುವತಿ, 34 ವರ್ಷದ ಮಹಿಳೆ, ಕಿಮಾನಿಯ 65 ವರ್ಷದ ಮಹಿಳೆ, ಬಗ್ಗೋಣದ 50 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.

ದಿವಗಿಯ 28 ವರ್ಷದ ಯುವಕ, ತಾರಮಕ್ಕಿಯ 26 ವರ್ಷದ ಇಬ್ಬರು ಯುವಕರು, ಕೋಟಿತೀರ್ಥದ 51 ವರ್ಷದ ಮಹಿಳೆ, ಮೂಡಂಗಿಯ 59 ವರ್ಷದ ಪುರುಷ, ಹೆಗಡೆಯ 25 ವರ್ಷದ ಯುವಕ, ಹಳಕಾರ ಜನತಾ ಪ್ಲಾಟ್‌ನ 34 ವರ್ಷದ ಪುರುಷ, 39 ವರ್ಷದ ಪುರುಷ, 23 ವರ್ಷದ ಮಹಿಳೆ, 4 ವರ್ಷದ ಬಾಲಕ, ಬಾಡದ 50 ವರ್ಷದ ಪುರುಷನಿಗೂ ಸೋಂಕು ಪತ್ತೆಯಾಗಿದೆ.

ಅಘನಾಶಿನಿಯ 55 ವರ್ಷದ ಮಹಿಳೆ, ಬರ್ಗಿಯ 65 ವರ್ಷದ ಮಹಿಳೆ, 36 ವರ್ಷದ ಮಹಿಳೆ, 33 ವರ್ಷದ ಪುರುಷ, 30 ವರ್ಷದ ಮಹಿಳೆ, ಗುಡೆಅಂಗಡಿಯ 68 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ. ಇಂದು 46 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾದಲ್ಲಿ ಸೋಂಕಿತರ ಸಂಖ್ಯೆ 1,449 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Exit mobile version