Join Our

WhatsApp Group
Info
Trending

ಅಂಕೋಲಾದಲ್ಲಿoದು 14 ಕೊವಿಡ್ ಕೇಸ್ : ಗುಣಮುಖ 8 : ಸಕ್ರಿಯ 88

ಮರಳುಗಾರಿಕೆಗೆ ಬಂದ ಹೊರ ರಾಜ್ಯದ ಕಾರ್ಮಿಕರಲ್ಲಿಯೂ ಸೋಂಕು
ಕಾರವಾರ ಕ್ರಿಮ್ಸ್ ಕೊವಿಡ್ ವಾರ್ಡ್ಗೆ ಸೇರ್ಪಡೆಗೊಂಡ ಕೊವಿಡ್ ಕಾರ್ಟ್ ಯಂತ್ರ

ಅಂಕೋಲಾ : ತಾಲೂಕಿನಲ್ಲಿ ಭಾನುವಾರ ಯಾವುದೇ ಕೊರೊನಾ ಕೇಸ್‌ಗಳು ಪತ್ತೆಯಾಗದೇ ಕೊಂಚ ರಿಲೀಪ್ ನೀಡಿತ್ತಾದರೂ, ಸೋಮವಾರ ಒಟ್ಟೂ 14 ಹೊಸ ಕೊವಿಡ್ ಕೇಸ್‌ಗಳು ದಾಖಲಾಗಿದೆ. ಗುಂಡಬಾಳ 3, ಬೆಳಸೆ 4 ಮತ್ತು ಹೊರ ರಾಜ್ಯದಿಂದ ಮರಳುಗಾರಿಕೆ ಕೆಲಸಕ್ಕೆ ಬಂದು ಕುದ್ರಿಗೆ-ಕೊಡ್ಸಣಿ ವ್ಯಾಪ್ತಿಯಲ್ಲಿ ತಂಗಿರುವ 7 ಜನರಲ್ಲಿ ಸೋಂಕು ಪತ್ತೆಯಾಗಿದೆ. ಗುಣಮುಖರಾದ 8 ಜನರನ್ನು ಬಿಡುಗಡೆ ಗೊಳಿಸಲಾಗಿದ್ದು, ಹೋಂ ಐಸೋಲೇಶನ್‌ನಲ್ಲಿರುವ 61 ಮಂದಿ ಸಹಿತ ಒಟ್ಟೂ 88 ಪ್ರಕರಣಗಳು ಸಕ್ರಿಯ ವಾಗಿದೆ.


ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಹಟ್ಟಿಕೇರಿಯಲ್ಲಿ 75 ಬೆಳಸೆಯಲ್ಲಿ 98, ಹಾರವಾಡ ದಲ್ಲಿ 125 ಆರ್‌ಟಿಪಿಸಿಆರ್ ಹಾಗೂ ತಾಲೂಕಾ ಆಸ್ಪತ್ರೆಯಲ್ಲಿ 13 ರಾಟ್ ಮತ್ತು 10 ಆರ್‌ಟಿಪಿಸಿಆರ್ ಸೇರಿದಂತೆ ಒಟ್ಟಾರೆಯಾಗಿ 321 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.


ಕೊವಿಡ್ ಕಾರ್ಟ್ : ಜಿಲ್ಲಾಧಿಕಾರಿಗಳಾದ ಡಾ. ಹರೀಶಕುಮಾರ ಕೆ. ನೇತೃತ್ವದಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್)ನ ಅಭಿವೃದ್ಧಿಗೆ ನಿರಂತರವಾಗಿ ಒತ್ತು ನೀಡಲಾಗಿದ್ದು, ಕೊವಿಡ್ ಐಸಿಯು ವಾರ್ಡ್ಗೆ ಹೊಸದಾದ ಕೊವಿಡ್ ಕಾರ್ಟ್ ಯಂತ್ರ ಸ್ಥಾಪಿಸಲಾಗಿದೆ. ಟೆಲ್ಸ್ನ ಟೆಕ್ನಾಲಜೀಸ್ ಕಂಪ ನಿಯಿಂದ ಕೊಡುಗೆ ನೀಡಲಾಗಿದ್ದು, ಹರ್ಷ ಮುರುರ್, ತಮ್ಮ ಕಂಪನಿಯ ಪರವಾಗಿ ಈ ಯಂತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಕ್ರೀಮ್ಸ್ ಸಂಸ್ಥೆಯ ನಿದೇರ್ಶಕ ಡಾ. ಗಜಾನನ ನಾಯಕ ಅವರಿಗೆ ಹಸ್ತಾಂತ ರಿಸಿದರು.


ಎಡಿಸಿ ಕೃಷ್ಣಮೂರ್ತಿ, ಪ್ರಭಾರಿ ವೈದ್ಯಕೀಯ ಅಧೀಕ್ಷ ಡಾ.ವೆಂಕಟೇಶ ಆರ್., ಪ್ರಾಶುಂಪಾಲ ಡಾ. ಶಿವಕುಮಾರ ಸೇರಿದಂತೆ ವೈದ್ಯರು, ಸಿಬ್ಬಂದಿಗಳು, ಉಪಸ್ಥಿತರಿದ್ದರು. ಡಾ.ವಿಶಾಂತ ಸ್ವಾಗತಿಸಿ ನಿರೂಪಿ ಸಿದರು, ಆಕಾಂಕ್ಷಾ ವಂದಿಸಿದರು. ಯಂತ್ರದ ಪ್ರಾತ್ಯಕ್ಷಿತೆ ನಡೆಸಲಾಯಿತು. ಈ ಹೊಸ ಯಂತ್ರದಿoದ ಕೊವಿಡ್ ವಾರ್ಡ್ಗೆ ಮತ್ತಷ್ಟು ಬಲಬಂದoತಾಗಿದ್ದು, ಅಧಿಕಾರಿಗಳು ಮತ್ತು ಸರ್ವರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿಯಂತಿದೆ.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Check Also
Close
Back to top button