Follow Us On

Google News
ಮಾಹಿತಿ
Trending

ಜಿಲ್ಲೆಯಲ್ಲಿಂದು 109 ಮಂದಿಗೆ ಸೋಂಕು: 162 ಮಂದಿ ಗುಣಮುಖ

ಜಿಲ್ಲೆಯಲ್ಲಿ ಇಂದು ಮೂವರ ಸಾವು
162 ಮಂದಿ ಗುಣಮುಖರಾಗಿ ಡಿಸ್ಚಾರ್ಜ್

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 109 ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಜೋಯಿಡಾದಲ್ಲಿ 25, , ಕಾರವಾರದಲ್ಲಿ 6, ಶಿರಸಿಯಲ್ಲಿ 11, ಸಿದ್ದಾಪುರ 22, ಮುಂಡಗೋಡಿನಲ್ಲಿ 4, ಅಂಕೋಲಾದಲ್ಲಿ 10, ಕುಮಟಾದಲ್ಲಿ 9, ಹೊನ್ನಾವರದಲ್ಲಿ 4 ಹಾಗೂ ಹಳಿಯಾಳದ 18 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಇಂದು ಮೂವರ ಸಾವು:

ಇದೇ ವೇಳೆ ಇಂದು 162 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 162 ಮಂದಿ ಗುಣಮುಖರಾಗಿದ್ದು, ಕಾರವಾರದಲ್ಲಿ 34, ಅಂಕೋಲಾದಲ್ಲಿ 1, ಕುಮಟಾ 66, ಹೊನ್ನಾವರದಲ್ಲಿ 7, ಭಟ್ಕಳ 10, ಶಿರಸಿ 29, ಸಿದ್ದಾಪುರ 14, ಜೋಯಿಡಾದ ಓರ್ವ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಇಂದು ಮೂವರು ಸಾವನ್ನಪ್ಪಿದ್ದು, ಇದರಿಂದಾಗಿ ಸಾವಿನ ಸಂಖ್ಯೆ 138ಕ್ಕೆ ಏರಿಕೆಯಾಗಿದೆ. ಯಲ್ಲಾಪುರ, ಹೊನ್ನಾವರ ಮತ್ತು ಕಾರವಾರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 11306 ಮಂದಿಯಲ್ಲಿ ಸೋಂಕು ದೃಢವಾಗಿದ್ದು, 9859 ಮಂದಿ ಗುಣಮುಖರಾಗಿದ್ದಾರೆ

ಶಿರಸಿಯಲ್ಲಿ 11 ಮಂದಿಗೆ ಸೋಂಕು

ಶಿರಸಿ: ತಾಲೂಕಿನಲ್ಲಿ ಇಂದು 11 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಸೋಮವಾರ ಹನುಮಂತಿಯಲ್ಲಿ 4, ಸದಾಶಿವಳ್ಳಿಯಲ್ಲಿ 2, ಬಾಳೆಗದ್ದೆಯಲ್ಲಿ 2, ವಿವೇಕಾನಂದ ನಗರದಲ್ಲಿ 2, ಇಂದಿರಾನಗರದ ಓರ್ವನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. 30 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button
Idagunji Mahaganapati Chandavar Hanuman