ಆಸ್ಪತ್ರೆಯಲ್ಲಿ ಇಲ್ಲದ ಸೋಂಕಿತರು!
ಹೋಂ ಐಸೋಲೇಶನ್ 14
ಅಂಕೋಲಾ : ತಾಲೂಕಿನಲ್ಲಿ ಭಾನುವಾರದಿಂದ ಮಂಗಳವಾರದವರೆಗೆ ಸತತ 3 ದಿನ ಯಾವುದೇ ಹೊಸ ಕೊರೊನಾ ಕೇಸ್‍ಗಳು ಪತ್ತೆಯಾಗದೆ, ಹ್ಯಾಟ್ರಿಕ್ ಬಿಡುವು ನೀಡಿದಂತಾಗಿದೆ. ಇದೇ ವೇಳೆ ಆಸ್ಪತ್ರೆಯಲ್ಲಿ ಕೊವಿಡ್ ಸಂಬಂಧಿತವಾಗಿ ಯಾವುದೇ ವ್ಯಕ್ತಿಗಳು ಚಿಕಿತ್ಸೆಗೆ ಒಳಪಡದೇ, ತಮ್ಮ ತಮ್ಮ ಮನೆಗಳಲ್ಲಿಯೇ (ಹೋಂ ಐಸೋಲೇಶನ್) ಚಿಕಿತ್ಸೆ ಒಳಪಟ್ಟಿದ್ದಾರೆ.
ಈ ಮೂಲಕ ಒಟ್ಟೂ 14 ಪ್ರಕರಣಗಳು ಸಕ್ರಿಯವಾಗಿದೆ.
ಹಟ್ಟಿಕೇರಿ 40, ಬೆಳಸೆ 50, ಹಿಲ್ಲೂರು 75 ಸೇರಿದಂತೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ 165 ಆರ್‍ಟಿಪಿಸಿಆರ್, ಪಟ್ಟಣ ವ್ಯಾಪ್ತಿಯಲ್ಲಿ ತಾಲೂಕಾ ಆಸ್ಪತ್ರೆಗೆ ಸಂಬಂಧಿಸಿದಂತೆ 4 ರ್ಯಾಟ್ ಮತು 13 ಆರ್‍ಟಿಪಿಸಿಆರ್ ಮಾದರಿ ಸಂಗ್ರಹಿಸಲಾಗಿದೆ.
ಈ ಮೂಲಕ ಒಟ್ಟಾರೆಯಾಗಿ 182 ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ
- ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು
- ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ ನಯವಂಚಕ : ಕೊನೆಗೂ ಖಾಕಿ ಬಲೆಗೆ ಬಿದ್ದ ಚಾಲಾಕಿ ?
- ಮುರ್ಡೇಶ್ವರದಲ್ಲಿ ಮೂರುದಿನಗಳ ವಿಶ್ವ ಮೀನುಗಾರಿಕೆ ದಿನಾಚರಣೆಗೆ ಸಿದ್ಧತೆ
- ಕುಮಟಾ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಅದ್ಧೂರಿ ಯಕ್ಷಗಾನ ಶುಭಲಕ್ಷಣ: ಹಳೆಬೇರು, ಹೊಸ ಚಿಗುರಿನ ಸಮ್ಮಿಲನ, ಅನುಭವಿ ಮೇಳದೊಂದಿಗೆ ಅಪೂರ್ವ ಕಲಾವಿದರ ಮಿಲನ