ಉತ್ತರಕನ್ನಡದ ಇಂದಿನ ಕರೊನಾ ವಿವರ

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು ಏಳು ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಮಂಗೋಡ್ಲಾದಲ್ಲಿ 3 ಪ್ರಕರಣ ಸೇರಿದಂತೆ ತೆಪ್ಪಾ, ಹೆರವಟ್ಟಾ, ಮಾದನಗೇರಿ, ಸಂತೇಗುಳಿ ಭಾಗದಲ್ಲಿ ತಲಾ ಒಂದೊoದು ಪ್ರಕರಣ ಪತ್ತೆಯಾಗಿದೆ.

ಮಂಗೋಡ್ಲಾದ 35 ವರ್ಷದ ಮಹಿಳೆ, 4 ವರ್ಷದ ಬಾಲಕಿ, 14 ಬಾಲಕಿ, ತೆಪ್ಪಾದ 39 ವರ್ಷದ ಮಹಿಳೆ, ಹೆರವಟ್ಟಾದ 14 ವರ್ಷದ ಬಾಲಕಿ, ಮಾದನಗೇರಿಯ 70 ವರ್ಷದ ವೃದ್ಧ, ಸಂತೆಗುಳಿಯ 35 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇಂದು 7 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,772 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಮೂರು ಕೇಸ್

ಇದೇ ವೇಳೆ, ಹೊನ್ನಾವರ ತಾಲೂಕಿನಲ್ಲಿ ಇಂದು ಮೂವರಲ್ಲಿ ಕರೊನಾ ಪಾಸಿಟಿವ್ ಕಂಡುಬಂದಿದೆ. ಹೊನ್ನಾವರ ಪಟ್ಟಣದ ಇಬ್ಬರಲ್ಲಿ ಕರ್ಕಿಯ ಓರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಪಟ್ಟಣದ 35 ವರ್ಷದ ಮಹಿಳೆ, 6 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಒಟ್ಟು 40 ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಂಕೋಲಾದಲ್ಲಿಂದು ಕೇಸ್ ನಿಲ್ : ಗುಣಮುಖ 4 : ಸಕ್ರಿಯ 20

ಅಂಕೋಲಾ : ತಾಲೂಕಿನಲ್ಲಿ ಶನಿವಾರ ಯಾವುದೇ ಹೊಸ ಕೊರೊನಾ ಪ್ರಕರಣಗಳು ದಾಖಲಾಗದೇ, ಕೊವಿಡ್ ಕೇಸ್ ನಿಲ್ ಆದಂತಾಗಿದೆ. ಗುಣಮುಖರಾದ 4 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 17 ಮಂದಿ ಸಹಿತ ಒಟ್ಟೂ 20 ಪ್ರಕರಣಗಳು ಸಕ್ರಿಯವಾಗಿದೆ. ತಾಲೂಕಿನ ವಿವಿಧೆಡೆಯಿಂದ 7 ರ್ಯಾಟ್ ಮತ್ತು 50 ಆರ್‍ಟಿಪಿಸಿಆರ್ ಸೇರಿ ಒಟ್ಟೂ 57 ಜನರ ಗಂಟಲು ದ್ರವ ಮಾದ ರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಶಿರಸಿಯಲ್ಲಿಂದು ಓರ್ವರಿಗೆ ಕರೊನಾ:

ಶಿರಸಿ: ತಾಲೂಕಿನಲ್ಲಿ ಶನಿವಾರ ಒಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ನಾಲ್ವರು ಗುಣಮುಖರಾಗಿ ಬಿಡುಗಡೆಯಗಿದ್ದಾರೆ. ಇಂದು ಪಟ್ಟಣದ ಚರ್ಚ್ ರಸ್ತೆಯ ಒಬ್ಬರಿಗೆ ಕೊರೊನಾ ದೃಢವಾಗಿದೆ. ಈವರೆಗೆ 1502 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, 1450 ಮಂದಿ ಗುಣಮುಖಗೊಂಡಿದ್ದಾರೆ.

ಯಲ್ಲಾಪುರದಲ್ಲಿ ಇಬ್ಬರಿಗೆ ಪಾಸಿಟಿವ್:

ಯಲ್ಲಾಪುರ: ತಾಲೂಕಿನಲ್ಲಿ ಶನಿವಾರ ಇಬ್ಬರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 35 ಕ್ಕೆ ಏರಿಕೆಯಾಗಿದೆ. ಇಂದು ಜಮಗುಳಿ ಹಾಗೂ ಹುಲ್ಲೋರಮನೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ಕಂಡು ಬಂದಿದೆ.


ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ ಮತ್ತು ವಿಲಾಸ ನಾಯಕ ಅಂಕೋಲಾ

Exit mobile version