ಕರೊನಾ: ಜಿಲ್ಲೆಯ ಜನರಿಗೆ ಬಿಗ್ ರಿಲೀಫ್

ಕುಮಟಾ : ತಾಲೂಕಿನಲ್ಲಿ ಇಂದು ಒಟ್ಟು 5 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಹೋನ್ಮಾವ್‌ದಲ್ಲಿ 2 ಕೇಸ್ ಸೇರಿದಂತೆ ಊರಕೇರಿ, ಸುವರ್ಣಗದ್ದೆ, ಅಘನಾಶಿನಿ ಭಾಗದಲ್ಲಿ ತಲಾ ಒಂದೊAದು ಪ್ರಕರಣ ಪತ್ತೆಯಾಗಿದೆ.

ಹೋನ್ಮಾವ್‌ದ 20 ವರ್ಷದ ಯುವತಿ, 39 ವರ್ಷದ ಮಹಿಳೆ, ಊರಕೇರಿಯ 40 ವರ್ಷದ ಮಹಿಳೆ, ಅಘನಾಶಿನಿಯ 78 ವರ್ಷದ ವೃದ್ಧ ಹಾಗೂ ಸುವರ್ಣಗದ್ದೆಯ 34 ವರ್ಷದ ಪುರುಷನಿಗೆ ಕರೋನಾ ಪಾಸಿಟಿವ್ ಬಂದಿದೆ. ಇಂದು 5 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1777 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಇಂದು ಯಾವುದೇ ಕೇಸ್ ಇಲ್ಲ

ಹೊನ್ನಾವರ: ತಾಲೂಕಿನಲ್ಲಿ ಇಂದು ಯಾವುದೇ ಕರೊನಾ ಕೇಸ್ ದಾಖಲಾಗಿಲ್ಲ. ತಾಲೂಕಿನಲ್ಲಿ ದಿನೇ ದಿನೇ ಕರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಅಂಕೋಲಾದಲ್ಲಿoದು ಕೊವಿಡ್ ಕೇಸ್‌ಗೆ ಬಿಡುವು

ಅಂಕೋಲಾ : ತಾಲೂಕಿನಲ್ಲಿ ಭಾನುವಾರವೋ ಯಾವುದೇ ಹೊಸ ಕೊರೊನಾ ಪ್ರಕರಣಗಳು ದಾಖಲಾ ಗದೇ, ಕೊವಿಡ್ ಕೇಸ್‌ಗೆ ಬಿಡುವು ನೀಡಿದಂತಾಗಿವೆ. ಹೋಂ ಐಸೋಲೇಶನ್‌ನಲ್ಲಿರುವ 17 ಮಂದಿ ಸಹಿತ ಒಟ್ಟೂ 20 ಪ್ರಕರಣಗಳು ಸಕ್ರಿಯವಾಗಿದೆ. ತಾಲೂಕಿನಲ್ಲಿ ಕೇವಲ 1 ರ‍್ಯಾಟ್ ಪರೀಕ್ಷೆ ರ‍್ಯಾಪಿಡ್ ಎಂಟಿಜನ್ ಟೆಸ್ಟ್) ನಡೆಸಲಾಗಿದೆ.

ಜಿಲ್ಲೆಯಲ್ಲಿಂದು 13 ಕೇಸ್

ಕರೊನಾ ಸೋಂಕು ಇಳಿಮುಖದತ್ತ ಸಾಗುತ್ತಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 13 ಕರೊನಾ ಕೇಸ್ ದಾಖಲಾಗಿದೆ. ಇದೇ ವೇಳೆ ಇಂದು ಜಿಲ್ಲೆಯಲ್ಲಿ ಇಂದು 16 ಮಂದಿ ಗುಣಮುಖರಾಗಿದ್ದಾರೆ.361 ಸಕ್ರೀಯ ಪ್ರಕರಣಗಳಿವೆ. ಕಾರವಾರದಲ್ಲಿ ಮೂರು, ಜೋಯ್ಡಾದಲ್ಲಿ ಮೂರು ಕೇಸ್ ಕಂಡುಬಂದಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲೊ ದಾಖಲಾದಂತೆ ಉಳಿದಂತರ ಭಟ್ಕಳ, ಶಿರಸಿ, ಯಲ್ಲಾಪುರದಲ್ಲಿ ಯಾವುದೇ ಕರೊನಾ ಕೇಸ್ ದಾಖಲಾಗಿಲ್ಲ.


ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ, ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ, ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Exit mobile version