Follow Us On

WhatsApp Group
Uttara Kannada
Trending

ಸಮುದ್ರಕ್ಕೆ ಈಜಲು ತೆರಳಿದ್ದ ಯುವಕ ನೀರುಪಾಲು: ಒಂದು ಗಂಟೆಯ ಬಳಿಕ ಮೃತದೇಹ ಪತ್ತೆ

ಭಟ್ಕಳ: ತಾಲೂಕಿನ ತೆಂಗಿನಗುoಡಿಯಲ್ಲಿ ಅರೇಬಿಯನ್ ಸಮುದ್ರದಲ್ಲಿ ಮುಳುಗಿ ಯುವಕನೊರ್ವ ಪ್ರಾಣ ಕಳೆದುಕೊಂಡಿದ್ದಾನೆ. ಮೃತ ಯುವಕ ತೆಂಗಿನಗುoಡಿ ಹೆಬಳೆ ನಿವಾಸಿ ಶಪೀಸಲ್ ಹಿಬ್ಬುರೆಹಮಾನ ಡಾಂಗೀ (24) ಎಂದು ತಿಳಿದು ಬಂದಿದೆ. ಮೃತ ಯುವಕ ತನ್ನ ಸ್ನೇಹಿತರೊಂದಿಗೆ ಸಮುದ್ರದ ಕ್ಕೆ ಈಜಲು ತೆರಳಿದಾಗ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ. ನೀರಿನಲ್ಲಿ ಮುಳುಗಿದ ಒಂದು ಗಂಟೆಯ ಬಳಿಕ ದೇಹ ಸಮುದ್ರದಲ್ಲಿ ಪತ್ತೆಯಾಗಿದೆ.

ನಂತರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿಯಲ್ಲಿ ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರಕಿದೆ. ಯುವಕರು ಇತ್ತೀಚೆಗೆ ಬಿ.ಕಾಂ ಪದವಿ ಪೂರೈಸಿದ್ದ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಮೃತರಿಗೆ ಅಂತಿಮ ನಮನ ಸಲ್ಲಿಸಲು ಅವರ ತಂದೆ ಮತ್ತು ಚಿಕ್ಕಪ್ಪ ದುಬೈನಿಂದ ಹಿಂದಿರುಗುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

[sliders_pack id=”1487″]

Back to top button