
- ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಸಾಮಾಜಿಕ ಕಾರ್ಯಕರ್ತರು
- ಮಾಜಿ ಶಾಸಕ ಸೈಲ್ರಿಂದಲೂ ಸಹಕಾರ
ಅಂಕೋಲಾ : ತಾಲೂಕಿನಲ್ಲಿ ಸೋಮವಾರ ಯಾವುದೇ ಹೊಸ ಕೋವಿಡ್ ಕೇಸ್ಗಳು ಪತ್ತೆಯಾಗಿಲ್ಲ ವಾದರೂ, ಕಾರವಾರದ ಕ್ರಿಮ್ಸ್ನ್ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದ ಅಂಕೋಲಾ ತಾಲೂಕಿನ ಕಣಗಿಲ್ ಗ್ರಾಮದ 54ರ ಪುರುಷನೊರ್ವ ಮೃತಪಟ್ಟಿದ್ದಾನೆ. ಈ ಮೂಲಕ ತಾಲೂಕಿನಲ್ಲಿ ಈವರೆಗೆ ಕೋವಿಡ್ನಿಂದ ಮೃತರಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮೃತ ಪುರಷನು ಟ್ರಾನ್ಸ್ಪೋರ್ಟ್ ಮತ್ತಿತರ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಡಿ.9 ರಂದು ಕಾರವಾರದ ಕ್ರಿಮ್ಸ್ಗೆ ದಾಖಲಾಗಿದ್ದು, ಆತನ ಪತ್ನಿ ಮತ್ತು ತಾಯಿಯಲ್ಲಿಯೂ ಪಾಸಿಟಿವ್ ಲಕ್ಷಣಗಳು ಪತ್ತೆಯಾಗಿತ್ತು ಎನ್ನಲಾಗಿದೆ.
ಮೃತನಲ್ಲಿ ಸಕ್ಕರೆ ಕಾಯಿಲೆ ಗುಣಲಕ್ಷಣಗಳಿದ್ದು, ಆಸ್ಪತ್ರೆಗೆ ತಡವಾಗಿ ದಾಖಲಾಗಿದ್ದರಿಂದ ಸೋಂಕು ಲಕ್ಷಣಗಳು ಉಲ್ಬಣಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೆ ಕಾರಣವಾಯಿತು ಎನ್ನಲಾಗಿದೆ.
ಕಾರವಾರದ ಆಸ್ಪತ್ರೆಯಿಂದ ಮೃತ ದೇಹ ಸಾಗಿಸುವವರೆಗೆ ತಮ್ಮದೇ ಆದ ವಿಶೇಷ ಕಾಳಜಿ ತೋರಿಸಿದ್ದ ಮಾಜಿ ಶಾಸಕ ಸೈಲ್, ಸ್ಥಳೀಯರು ಅಲಭ್ಯರಾದರೆ ಕಾರವಾರದ ಕೆಲವರನ್ನು ಕರೆಯಿಸಿ ಅಂತ್ಯಸಂಸ್ಕಾರ ನಡೆಸಲು ಸಿದ್ಧತೆ ನಡೆಸಿದ್ದರು. ಈ ವೇಳೆಗಾಗಲೇ ಅಂಕೋಲಾದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದಿದ್ದು ‘ವಿಜಯ’ದ ನಗೆ ಬಿರುವ ನಾಯಕ ಮತ್ತು ಆತನ ತಂಡದವರು ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ನೆರವೇರಿಸಿ ಮಾದರಿಯಾದರು. ಸ್ಥಳೀಯರು ಮತ್ತು ಕೊರೊನಾ ವಾರಿಯರ್ಸ್ಗೆ ಸಂಬಂಧಿಸಿದ ವಿವಿಧ ಇಲಾಖೆಯವರು ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
- ಜಿಲ್ಲಾ ಮಟ್ಟದ ಪ್ರಥಮ ವರ್ಷದ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಿ: ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ ಅಂಕೋಲಾದಿoದ ಆಯೋಜನೆ
- ನೀಲಗೋಡ ಜಾತ್ರೆ ಯಶಸ್ವಿಯಾಗಿ ಸಂಪನ್ನ: ಯಕ್ಷಿ ಚೌಡೇಶ್ವರಿ ದೇವಿಯ ದರ್ಶನ ಪಡೆದ ಅಪಾರ ಭಕ್ತರು
- Job: ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಉದ್ಯೋಗಾವಕಾಶ: ಇಂದೇ ಸಂಪರ್ಕಿಸಿ
- ಇಸ್ರೆಲ್ ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ: 1 ಲಕ್ಷದ 70 ಸಾವಿರ ಸಂಬಳ
- ಏಪ್ರಿಲ್ 12 ರಂದು ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ ಶಿಪ್ ಪ್ರವೇಶಾತಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪಡೆಯುವ ಸುವರ್ಣಾವಕಾಶ