
1998ರಲ್ಲಿ ಪ್ರಕರಣ ದಾಖಲಾಗಿತ್ತು
ವರ್ತನಕನ ಬಳಿ ಆರು ಸಾವಿರ ಸಾಲಪಡೆದಿದ್ದ
ಶಿರಸಿ: ಇದು ಬರೊಬ್ಬರಿ 23 ವರ್ಷಗಳ ಹಿಂದನ ಪ್ರಕರಣ. 1997ರಲ್ಲಿ ಬಂಗಾರದ ವರ್ತಕನ ಬಳಿ ವ್ಯಕ್ತಿಯೊಬ್ಬ ಹಣಪಡೆದುಕೊಂಡಿದ್ದ. ಆದರೆ, ಹಣ ವಾಪಸ್ ನೀಡಲಿಲ್ಲ ಎಂದು 1998ರಲ್ಲಿ ವರ್ತಕ ಈ ಸಂಬoಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದರು. ಆದರೆ, ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಈಗ ಅಂದರೆ 23 ವರ್ಷಗಳ ಬಳಿಕ ಆರೋಪಿ ಶಿರಸಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿ ದತ್ತಾತ್ರೇಯ ಹೆಗಡೆಯನ್ನು ಬಂಧಿಸಲಾಗಿದೆ. ಈಗ ಯಲ್ಲಾಪುರದ ಮಂಚಿಕೇರಿಯ ನಿವಾಸಿ ಎಂದು ತಿಳಿದುಬಂದಿದೆ. ಆರೋಪಿ 1997ರಲ್ಲಿ ವರ್ತಕನ ಬಳಿಕ ಆರು ಸಾವಿರ ಸಾಲಪಡೆದುಕೊಂಡಿದ್ದ. ಈಗ ಕೇವಲ ಆರು ಸಾವಿರಕ್ಕಾಗಿ ಬಂಧನಕ್ಕೀಡಾಗುವ ಪರಿಸ್ಥಿತಿ ಬಂದಿದೆ.
ವಿಸ್ಮಯ ನ್ಯೂಸ್, ಶಿರಸಿ