Uttara Kannada
Trending

ಕನ್ನಡ ಚಲನಚಿತ್ರಕ್ಕೆ ಉತ್ತರಕನ್ನಡದ ಕಲಾವಿದರ ಆಯ್ಕೆ

ವಯೋಮಿತಿ ಇಲ್ಲ: ಆಸಕ್ತರು ಭಾಗವಹಿಸಬಹುದು
ಎರಡು ನಿಮಿಷದ ಅಭಿನಯದ ತುಣುಕು ಸಿದ್ಧಪಡಿಸಿಕೊಂಡು ಹೋಗಿ

ಹೊನ್ನಾವರ: ಹ್ಯಾಟ್ರಿಕ್ ರಾಜ್ಯ ಪ್ರಶಸ್ತಿ ಪಡೆದ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಿರ್ದೇಶಕ ವಿಶಾಲ್ ರಾಜ್ ಅವರ, ಎಸ್.ಸಿ ಉಷಾರಾಣಿ ನಿರ್ಮಾಣದ ಐತಿಹಾಸಿಕ ಚಲನಚಿತ್ರ ಉತ್ತರಕನ್ನಡ ಭಾಗದಲ್ಲಿ ಚಿತ್ರೀಕರಣ ನಡೆಸಲಿದ್ದು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ. ಕಲ್ಯಾಣಿ ಪ್ರೊಡಕ್ಷನ್ಸ್ ಅರ್ಪಿಸುವ ಡಾ. ರಾಜಶೇಕರ್ ಮಠಪತಿ ಅವರ ಕಾದಂಬರಿ ಆಧಾರಿತ “ದಂಡಿ” ಚಲನಚಿತ್ರಕ್ಕೆ ಜಿಲ್ಲೆಯ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಇದೇ ಜನವರಿ 24 ರ ರವಿವಾರ ಬೆಳಿಗ್ಗೆ 10 ರಿಂದ 1 ಗಂಟೆಯ ವರೆಗೆ ಹೊನ್ನಾವರ ಗಾಂಧಿನಗರದ ರೋಟರಿ ಕ್ಲಬ್ ಭವನದಲ್ಲಿ ಆಯ್ಕೆ ಪ್ರಕ್ರಿಯೆ ಜರುಗಲಿದೆ.

ಆಸಕ್ತರು 2 ನಿಮಿಷಗಳ ಕಾಲಾವಧಿಯ ಅಭಿನಯದ ತುಣುಕನ್ನು ಸಿದ್ಧಪಡಿಸಿಕೊಂಡು, ಜೊತೆಗೆ ಭಾವ ಚಿತ್ರದೊಂದಿಗೆ ಬರಲು ಕೋರಲಾಗಿದೆ. ಯಾವುದೇ ವಯೋಮಿತಿ ಇಲ್ಲದಿರುವುದರಿಂದ ಜಿಲ್ಲೆಯ ಆಸಕ್ತ ಕಲಾವಿದರು ಪ್ರಯೋಜನ ಪಡೆಯಬಹುದಾಗಿದೆ. 

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button