Follow Us On

WhatsApp Group
Uttara Kannada
Trending

ಕಿಡಿಗೇಡಿಗಳಿಂದ ರೈಲ್ವೆ ಹಳಿ ಬಳಿ ಬೆಂಕಿ: ತಾತ್ಕಾಲಿಕವಾಗಿ ರೈಲ್ವೆ ಸಂಚಾರಕ್ಕೆ ತಡೆ

ಕಾರವಾರ: ಯಾರೋ ಕಿಡಿಗೇಡಿಗಳು ರೈಲ್ವೆ ಹಳಿಯ ಬಳಿ ಬೆಂಕಿ ಹಚ್ಚಿದ್ದು, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ನಡೆಯಬಹುದಾದ ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ ಘಟನೆ ಕಾರವಾರ ತಾಲೂಕಿನ ಅಮದಳ್ಳಿ ಬಳಿ ನಡೆದಿದೆ. ಅಮದಳ್ಳಿ ಬಳಿ ಕೊಂಕಣ ರೈಲ್ವೆ ಮಾರ್ಗದ ಎರಡೂ ಬದಿ ಅಕೇಶಿಯಾ ಗಿಡಗಳನ್ನು ದಟ್ಟವಾಗಿ ಬೆಳೆಸಿದ್ದು, ಕೆಲ ದುಷ್ಕರ್ಮಿಗಳು ಕಟ್ಟಿಗೆ ಕಡಿಯುವ ದುರಾಸೆಯಿಂದ ಮಧ್ಯಾಹ್ನದ ವೇಳೆ ಸಾರ್ವಜನಿಕ ಸಂಚಾರ ಕಡಿಮೆ ಇರುವುದನ್ನು ಗಮನಿಸಿ ರೈಲ್ವೆ ಹಳಿಯ ಪಕ್ಕದ ಗಿಡಗಳಿಗೆ ಬೆಂಕಿ ಹಚ್ಚಿದ್ದರು. ಮಧ್ಯಾಹ್ನದ ಬಿರು ಬಿಸಿಲು ದೊಡ್ಡ ಜ್ವಾಲೆಯಾಗಿ ಹಬ್ಬುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಶಿಕ್ಷಕ ಉದಯ ನಾಯ್ಕ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ನಾಯ್ಕ ಅವರ ಮೂಲಕ ಅಗ್ನಿಶಾಮಕ ದಳದ ವಾಹನವನ್ನು ಕರೆಯಿಸಿ ಬೆಂಕಿಯನ್ನು ನಂದಿಸಿ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣವಾಗಿ ಬೆಂಕಿ ಆರುವವರೆಗೂ ರೈಲ್ವೆ ಸಂಚಾರವನ್ನು ತಾತ್ಕಾಲಿಕವಾಗಿ ತಡೆದು ನಿಲ್ಲಿಸಲಾಗಿತ್ತು. ಸ್ಥಳದಲ್ಲಿ ಅಮದಳ್ಳಿ ಗ್ರಾಮ ಪಂಚಾಯತಿ ಸದಸ್ಯ ರಾಜೇಶ್ ಮಡಿವಾಳ, ಗ್ರಾಮ ಪಂಚಾಯತಿ ಸಿಬ್ಬಂದಿ ಸಂತೋಷ್ ಚಿಂಚನ್ಕರ್ ಉಪಸ್ಥಿತರಿದ್ದರು.

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ)  ಮೊಬೈಲ್ : 9886460777,,, INDIAN FAMOUS ASTROLOGER ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777


ವಿಸ್ಮಯ ನ್ಯೂಸ್, ಕಾರವಾರ

Back to top button