ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:ಸಾಬೂನು, ಬಟ್ಟೆಸೋಪು , ಮೈ ಸೋಪ್ , ಟೂತ್‍ಪೇಸ್ಟ್ ತಯಾರಿಕೆ, ಪ್ರಾತ್ಯಕ್ಷಿಕೆ

ಬಡಗಣಿ : ಸ್ನೇಹಕುಂಜ ಕಾಸರಕೋಡ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್ ಕುಮಟಾ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಆಧ್ಯಕ್ಷರೂ ಹಾಗೂ ಖ್ಯಾತ ವೈದ್ಯರಾದಂತಹ ಡಾ|| ಅಶೋಕ ಭಟ್ ಹಳಕಾರ್ ರವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಷಯ ವನ್ನು ತಿಳಿಸುತ್ತಾ, ಮಹಿಳೆಯರು ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರವಾದುದು. ಸಾದನೆ ಮಾಡಿದ ಮಹಿಳೆಯರನ್ನು ನೆನಪಿಸುವದರೊಂದಿಗೆ ಮಹಿಳೆಯರಿಗೆ ಸ್ತನ ಕ್ಯಾನ್ಸರ್, ಕರುಳ ಕ್ಯಾನ್ಸರ್ ಕುರಿತಾಗಿ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಲಕ್ಷ್ಮೀ ದಳವಾಯಿ ಕೃಷಿ ಅಧಿಕಾರಿ ಹೊನ್ನಾವರ ಇವರು ಮಾತನಾಡುತ್ತಾ ಮಹಿಳೆರು ಅಬಲೆಯರಲ್ಲ ಸಬಲರು, ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕಾದಲ್ಲಿ ಆರೋಗ್ಯವು ಕೂಡ ಅಷ್ಟೇ ಮುಖ್ಯ ಎಂದು ತಿಳಿಸಿದರು. ಫ್ಯಾಮಿಲಿ ಪ್ಲ್ಯಾನಿಂಗ್ ಮ್ಯಾನೇಜರ್ ಆದ ಶ್ರೀಮತಿ ಸಂತಾನ್ ಲೂಯಿಸ್ ರವರು ಮಹಿಳಾದಿನಾಚರಣೆ ಅಂಗವಾಗಿ ಮಾತನಾಡಿದರು.

ಮಹಿಳೆಯರು ತಮ್ಮ ಸಂತ ಕಾಲಿನಲ್ಲಿ ನಿಲ್ಲಬೇಕೆಂದು ಸ್ವ ಉದ್ಯೋಗ ಮಾಡುವ ಬಗ್ಗೆ ಆತ್ಮ ಯೋಜನೆ ಅಡಿಯಲ್ಲಿ ಶೇತಾ ವಿವೇಕಾನಂದ ರಾಯ್ಕರ್ ರವರು ತರಬೇತಿಯನ್ನು ಹಮ್ಮಿಕೊಂಡಿದ್ದರು. ಸಾಬೂನು ತಯಾರಿಕೆ, ಬಟ್ಟೆಸೋಪು ತಯಾರಿಕೆ, ಮೈ ಸೋಪ್ ತಯಾರಿಕೆ, ಟೂತ್‍ಪೇಸ್ಟ ತಯಾರಿಕೆ, ಮುಂತಾದವುಗಳನ್ನು ಪ್ರಾತ್ಯಕ್ಷಿಕವಾಗಿ ತಯಾರಿಸಿದರು.

ಅಧ್ಯಕ್ಷತೆ ವಹಿಸಿದ ಸ್ನೇಹಕುಂಜದ ಸಮಾಜ ಕಾರ್ಯಕರ್ತೆಯಾದ ಶ್ರೀಮತಿ ಚಂದ್ರಕಲಾ ಗಾವಡಿಯವರು ಮಹಿಳೆಯರಿಗೆ ಕೆಲವು ಹಿತನುಡಿಯನ್ನು ನುಡಿದು ಸ್ನೇಹಕುಂಜದಲ್ಲಿ ಸಿಗುವ ಸೌಲಭ್ಯದ ಕುರಿತು ತಿಳಿಸಿದರು. ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಪ್ರೋಗ್ರಾಮ್ ಆಫೀಸರ್ ಆದಂತಹ ಕುಮಾರಿ ಮಂಜುಳಾ ಗೌಡ ಸ್ವಾಗತಿಸಿದರು. ರೋಹಿಣ ಚಂದ್ರಶೇಖರ್ ಇವರು ವಂದನಾರ್ಪಣೆ ನೆರವೇರಿಸಿಕೊಟ್ಟರು.

ಶ್ರೀ ಕಟೀಲು ದುರ್ಗಾಪರಮೇಶ್ವರಿ  ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್  ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

Exit mobile version