ಮಾಹಿತಿ
Trending

ಸಣಕೂಸ ಗೌಡ ವಿಧಿವಶ|ಬಹುಮುಖ ವ್ಯಕ್ತಿತ್ವದ ಮಾದರಿ ಕೃಷಿಕ, ಯಕ್ಷಗಾನ ಕಲಾವಿದ, ರಾಜಕೀಯ ನೇತಾರ, ಕ್ರೀಡಾ ಪ್ರೇಮಿ| ಸ್ಪೀಕರ್ ಕಾಗೇರಿ ಸೇರಿ ಗಣ್ಯರಿಂದ ಸಂತಾಪ

ಅಂಕೋಲಾ: ಮೂಲತಃ ಬೆಳಂಬಾರದ ಹಾಲಿ ಕೋಗ್ರೆ ನಿವಾಸಿಯಾಗಿದ್ದ ಸಣಕೂಸ ಸುಕ್ರು ಗೌಡ (76) ರವಿವಾರ ಸ್ವಗ್ರಹದಲ್ಲಿ ವಿಧಿವಶರಾದರು.

ಮಾದರಿ ಕೃಷಿಕ: ಕೃಷಿ ಕುಟುಂಬದಿಂದ ಬೆಳೆದು ಬಂದ ಇವರು ರೈತಾಬಿ, ಜೇನು ಸಾಕಾಣಿಕೆ, ಸಿಗಡಿ ಕೃಷಿ ಮೂಲಕ ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿದ್ದರು. ಅಂಕೋಲಾದ ಇಶಾಡ ಮತ್ತಿತರ ಹೆಸರಾಂತ ತಳಿಗಳ ಮಾವಿನ ಹಣ್ಣು, ಗೇರು ಬೀಜದ ವ್ಯಾಪಾರದ ಮೂಲಕ ರಾಜ್ಯ – ಹೊರರಾಜ್ಯದ ಮಾರುಕಟ್ಟೆಯಲ್ಲಿ ಹೆಸರುಗಳಿಸಿದ್ದರು.

ಯಕ್ಷಗಾನದ ಮೇರು ಕಲಾವಿದರಾಗಿ ಕಂಸ ಮತ್ತಿತರ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿ ಯಕ್ಷ ಪ್ರಿಯರ ಮನ ಗೆದ್ದಿದ್ದರು. ಸ್ಥಳೀಯ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿಯೂ ಆಸಕ್ತಿ ಹೊಂದಿದ್ದರು.

ಅಪ್ಪಟ ಕ್ರೀಡಾಭಿಮಾನಿ: ಬಾಸಗೋಡದ ಜನತಾ ಕ್ರಿಕೆಟ್ ಕ್ಲಬ್ ಸೇರಿದಂತೆ ಕೋಗ್ರೆ, ಬೆಳಂಬಾರ, ಪೂಜಗೇರಿ ಮತ್ತಿತರ ಸುತ್ತಮುತ್ತಲ ಹಳ್ಳಿಗಳಲ್ಲಿ ಯಾವುದೇ ಸಮುದಾಯದವರು ನಡೆಸುವ ಕ್ರಿಕೆಟ್ ,ಕಬ್ಬಡ್ಡಿ, ವಾಲಿಬಾಲ್ ಪಂದ್ಯವಳಿಯ ಬಹುತೇಕ ಎಲ್ಲಾ ಪಂದ್ಯಗಳನ್ನು ವೀಕ್ಷಿಸಿ, ಕ್ರೀಡಾ ಸಂಘಟನೆ ಮತ್ತು ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸುತ್ತಾ ಅಪ್ಪಟ ಕ್ರೀಡಾಭಿಮಾನ ತೋರ್ಪಡಿಸುತ್ತಿದ್ದರು.

ಅಪರೂಪದ ರಾಜಕೀಯ ನೇತಾರ : ಸದಾ ಶುಭ್ರ ವಸ್ತ್ರಧಾರಿಯಾಗಿ, ನಿಗರ್ವಿಯಾಗಿ, ತಮ್ಮ ಸರಳ ಮತ್ತುನೇರ ನಡೆ ನುಡಿಗಳಿಂದ ಹೆಸರಾಗಿದ್ದ ಇವರು ಜನಸಂಘ ಕಾಲದಿಂದಲೂ ಬಿಜೆಪಿ ಕಾರ್ಯಕರ್ತರಾಗಿ, ತಾಲೂಕು ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷರಾಗಿ, ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ 3 ದಶಕಗಳ ಕಾಲ ಸಕ್ರೀಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಅಂದಿನ ಕಾಲಾವಧಿಯಲ್ಲಿ ಯಡಿಯೂರಪ್ಪನವರ ಜೊತೆ ತಾಲೂಕಿನ ಹಳ್ಳಿ-ಹಳ್ಳಿಗೆ ತೆರಳಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದ ಇವರು, ಕುಂಬ್ಳೆ ಸುಂದರ ರಾವ್, ಕೇಂದ್ರದ ಮಾಜಿ ಸಚಿವ ದಿ. ಅನಂತ ಕುಮಾರ ಹೆಗಡೆ ಬೆಂಗಳೂರು ಸೇರಿದಂತೆ ಘಟಾನುಘಟಿ ನಾಯಕರ ಅತ್ಮೀಯ ವಲಯದಲ್ಲಿ ಗುರುತಿಸಿಕೊಂಡಿದ್ದರು. ತಾಲೂಕಿನ ವಿವಿಧ ಸ್ತರದ ಹಲವು ಜನಪ್ರತಿನಿಧಿ ಗಳ ಗೆಲುವಿಗೆ ತನ್ನದೇ ಆದ ಕೊಡುಗೆ ನೀಡಿದ್ದರು. ಬದಲಾದ ರಾಜಕೀಯ ಘಟ್ಟದಲ್ಲಿ ರಾಜಕೀಯದ ಕೆಸರು ತಮ್ಮ ಶುಭ್ರ ವ್ಯಕ್ತಿತ್ವಕ್ಕೆ ಬಡಿಯದಂತೆ ರಾಜಕೀಯದಿಂದ ದೂರ ಸರಿದು ತಟಸ್ಥರಾಗಿ ಉಳಿದಿದ್ದರು.

ಸಮಾಜದ ಎಲ್ಲಾ ವರ್ಗದೊಂದಿಗೆ ಅನೋನ್ಯ ಸಂಬಂಧ ಹೊಂದಿ ಬಾಳಿ ಬದುಕಿದ್ದ ಇವರು, ಗಂಡು ಮಕ್ಕಳಾದ ದಿನೇಶ, ಉಮೇಶ, ಮಾಬ್ಲೇಶ್ವರ, ಮತ್ತು ಹೆಣ್ಣು ಮಕ್ಕಳಾದ ಶಾರದಾ, ಶಾಂತಿ ಸೇರಿದಂತೆ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ತೊರೆದಿದ್ದಾರೆ.

ಸಂತಾಪ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕ ಸತೀಶ ಸೈಲ್ , ಮಾಜಿ ಸಚಿವ ಆನಂದ ಅಸ್ನೋಟಿಕರ, ಮಾಜಿ ವಿ.ಪ.ಸದಸ್ಯೆ ಶುಭಲತಾ ಅಸ್ನೋಟಿಕರ, ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಹಲವಾರು ಗಣ್ಯರು ಹಿರಿಯ ನೇತಾರನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9886460777,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9886460777

Back to top button