ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೋವಿಡ್ ಸೋಂಕು ನಿಧಾನವಾಗಿ ಏರಿಕೆಯಾಗುತ್ತಿರುವುದು,ಜಿಲ್ಲೆಯ ಜನರಿಗೆ ಎಚ್ಚರಿಕೆ ಗಂಟೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಮಾಹಿತಿ ಗಮನಿಸಿದರೆ, ಇದು ಸ್ಪಷ್ಟವಾಗುತ್ತದೆ.
ಜುಲೈ 3 ರಂದು ಜಿಲ್ಲೆಯಲ್ಲಿ 34 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಜುಲೈ 4 ರಂದು ಸೋಂಕಿತ ಪ್ರಕರಣಗಳ ಸಂಖ್ಯೆ 19 ಕ್ಕೆ ಇಳಿಕೆಯಾಗಿತ್ತು. ಇದು ಕಳೆದ 3 ತಿಂಗಳ ಅವಧಿಯಲ್ಲಿ ದಾಖಲಾದ ಅತಿ ಕಡಿಮೆ ಸೋಂಕಿತ ಪ್ರಕರಣವಾಗಿತ್ತು. ಆದರೆ ಮೂರ್ನಾಲ್ಕು ದಿನಗಳಿಂದ ಸೋಂಕು ಸ್ವಲ್ಪಮಟ್ಟಿನ ಏರಿಕೆ ಕಾಣುತ್ತಿದೆ.
ಅನ್ಲಾಕ್ ಬಳಿಕ ಜನರ ಓಡಾಟ ಜಾಸ್ತಿಯಾಗುತ್ತಿದೆ. ಹೀಗಾಗಿ ಪೇಟೆಯ ತುಂಬೆಲ್ಲ ಜನಸಂದಣಿ ಹೆಚ್ಚುತ್ತಿದೆ. ಇದು ಹೀಗೆ ಮುಂದುವರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.
ಉತ್ತರಕನ್ನಡದ ಇಂದಿನ ಕೋವಿಡ್ ವಿವರ ಇಲ್ಲಿದೆ
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 42 ಕೋವಿಡ್ ಕೇಸ್ ದಾಖಲಾಗಿದೆ. ಅತಿಹೆಚ್ಚು ಅಂದರೆ ಶಿರಸಿಯಲ್ಲಿ 9 ಕೇಸ್ ದೃಢಪಟ್ಟಿದೆ. ಉಳಿದ ತಾಲೂಕಿನಲ್ಲಿ ಎಲ್ಲೆಲ್ಲಿ ಎಷ್ಟು ಕೇಸ್ ದೃಢಪಟ್ಟಿದೆ ಎಂಬುದರ ವಿವರ ಇಲ್ಲಿದೆ ನೋಡಿ. ಅಲ್ಲದೆ ಇಂದು ಯಾವುದೇ ಸಾವು ಸಂಭವಿಸಿಲ್ಲ.
ಅಂಕೋಲಾದಲ್ಲಿ 2 ಹೊಸ ಕೊವಿಡ್ ಕೇಸ್: 702 ಡೋಸ್ ಲಸಿಕೆ ನೀಡಿಕೆ
ಅಂಕೋಲಾ; ತಾಲೂಕಿನಲ್ಲಿ ಬುಧವಾರ 2 ಹೊಸ ಕೊವಿಡ್ ಕೇಸಗಳು ದಾಖಲಾಗಿದೆ. ಈ ಮೂಲಕ ಒಟ್ಟೂ 18 ಸೋಂಕು ಪ್ರಕರಣಗಳು ಸಕ್ರಿಯವಾಗಿದೆ. ಒಟ್ಟೂ 4 ಸೊಂಕಿತರು ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕು ಲಕ್ಷಣಗಳುಳ್ಳ ಇತರೆ 14 ಜನರು ಹೋಂ ಐಸೋಲೇಶನ್ ನಲ್ಲಿ ಇದ್ದಾರೆ.
ಬುಧವಾರ ಬೇಳಾ ಬಂದರ ಐಟಿಐ ಕಾಲೇಜ್ (234), ಶಿರಕುಳಿ ಐಟಿಐ ಕಾಲೇಜ್ (35),ಪಟ್ಟಣದ ಕೆ ಎಲ್ ಇ ಕಾಲೇಜ್ (160), ಜಿಸಿ ಕಾಲೇಜ್ ಮತ್ತು ಪೂಜಗೇರಿಯ ಸ.ಪ್ರ.ದ.ಕಾಲೇಜ್ ವಿದ್ಯಾರ್ಥಿಗಳು ಸೇರಿ ( 190) ವಿದ್ಯಾರ್ಥಿಗಳಿಗೆ ಲಸಿಕೆ ನೀಡಾಗಿದೆ. ಉಳಿದಂತೆ ರಾಮನಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (83 ) ಲಸಿಕೆ ನೀಡಿಕೆ ಸೇರಿ ತಾಲೂಕಿನಲ್ಲಿ ಒಟ್ಟೂ 702 ವ್ಯಾಕ್ಸಿನೇಶನ್ ನಡೆದಿದೆ.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ