Follow Us On

WhatsApp Group
ಮಾಹಿತಿ
Trending

ಅಂಕೋಲಾದಲ್ಲಿ 9 ಹೊಸ ಕೊವಿಡ್ ಕೇಸ್ | ರವಿವಾರ 500 ಡೋಸ್ ಲಸಿಕೆ ನೀಡಿಕೆಗೆ ಕ್ರಮ

ಅಂಕೋಲಾ ಜುಲೈ 17: ತಾಲೂಕಿನಲ್ಲಿ ಶನಿವಾರ 9 ಹೊಸ ಕೊವಿಡ್ ಕೇಸಗಳು ದಾಖಲಾಗಿದೆ. ಈ ಮೂಲಕ ಒಟ್ಟೂ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 56 ಕ್ಕೆ ಏರಿಕೆಯಾಗಿದೆ.

ತಾಲೂಕು ಮೂಲದ ಒಟ್ಟೂ 8 ಸೊಂಕಿತರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಲಕ್ಷಣಗಳುಳ್ಳ ಇತರೆ 48 ಜನರು ಹೋಂ ಐಸೋಲೇಶನ್ ನಲ್ಲಿ ಇದ್ದಾರೆ. ಈ ವರೆಗೆ ತಾಲೂಕಿನಲ್ಲಿ 63 ಕೊವಿಡ್ ಸಾವಿನ ಪ್ರಕರಣ ದಾಖಲಾಗಿದೆ.

ಜುಲೈ 18 ರ ರವಿವಾರ ತಾಲೂಕಿನ ಪಟ್ಟಣ ವ್ಯಾಪ್ತಿಯ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನ (150), ಗ್ರಾಮೀಣ ವ್ಯಾಪ್ತಿಯ ಕೋಡ್ಸಣಿ (110), ಆಂದ್ಲೆ – ಬ್ರಹ್ಮೂರ (140),ಬೊಬ್ರುವಾಡಾ(100) ಸೇರಿ 500 ಡೋಸ್ ಲಸಿಕೆಗಳನ್ನು (2 ನೇ ಹಂತದವರಿಗೆ ಮಾತ್ರ) ನೀಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎ೦ದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button